Webdunia - Bharat's app for daily news and videos

Install App

ಸಖತ್ ಟೇಸ್ಟ್ ಕೊಡುವ ಸಿಗಡಿ ಕರಿ ರೆಸಿಪಿ

Webdunia
ಬುಧವಾರ, 2 ಆಗಸ್ಟ್ 2023 (11:07 IST)
ಈ ಕರಿ ಗೋವಾದಲ್ಲಿ ತುಂಬಾ ಫೇಮಸ್ ಮಾತ್ರವಲ್ಲದೇ ಮಾಡೋದೂ ತುಂಬಾ ಸುಲಭವಾಗಿದೆ. ತೆಂಗಿನ ಹಾಲು ಬಳಸಿ ಸಿಗಡಿಯನ್ನು ಬೇಯಿಸಿ ಮಾಡಲಾಗುವ ಕರಿಯ ಸ್ವಾದವೇ ಅದ್ಭುತ ಎನಿಸುತ್ತದೆ.
 
ಬೇಕಾಗುವ ಪದಾರ್ಥಗಳು
ಸಿಗಡಿ – 500 ಗ್ರಾಂ
ಅರಿಶಿನ – ಒಂದೂವರೆ ಟೀಸ್ಪೂನ್
ಹೆಚ್ಚಿದ ಈರುಳ್ಳಿ – 1
ಎಣ್ಣೆ – 1 ಟೀಸ್ಪೂನ್
ಕೆಂಪು ಮೆಣಸಿನಕಾಯಿ – 5
ಕೊತ್ತಂಬರಿ – 1 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಕರಿಮೆಣಸು – 5
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಲವಂಗ – 4
ವಿನೆಗರ್ – ಕಾಲು ಕಪ್
ತೆಂಗಿನ ಹಾಲು – 1 ಕಪ್ 

ಮಾಡುವ ವಿಧಾನ
* ಮೊದಲಿಗೆ ಸಿಗಡಿಗಳನ್ನು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಅರಿಶಿನದೊಂದಿಗೆ 15-20 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ.
* ಅರಿಶಿನ, ಕೆಂಪು ಮೆಣಸಿನಕಾಯಿ, ಜೀರಿಗೆ, ಕರಿಮೆಣಸು, ಲವಂಗ ಮತ್ತು ವಿನೆಗರ್ ಅನ್ನು ಮಿಕ್ಸರ್ ಜಾರ್ನಲ್ಲಿ ರುಬ್ಬಿ ಪಕ್ಕಕ್ಕಿಡಿ.
* ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಜೀರಿಗೆ, ಕರಿಬೇವಿನ ಎಲೆಗಳು ಮತ್ತು ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ ಹುರಿಯಿರಿ.
* ನಂತರ ಈರುಳ್ಳಿ ಸೇರಿಸಿ, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
* ರುಬ್ಬಿಕೊಂಡ ಮಸಾಲೆ ಹಾಗೂ ಸಿಗಡಿಯನ್ನು ಸೇರಿಸಿ, ಸೀಗಡಿಗಳು ಗುಲಾಬಿ ಬಣ್ಣ ಬರುವವರೆಗೆ ಬೇಯಿಸಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಮುಂದಿನ ಸುದ್ದಿ
Show comments