ಬೆಂಗಳೂರು: ಕೂದಲು ಬೆಳವಣಿಗೆಗೆ, ಕಣ್ಣಿನ ಆರೋಗ್ಯಕ್ಕೆ ಪಾಲಕ್ ಸೊಪ್ಪಿನ ಸೇವನೆ ತುಂಬಾ ಉತ್ತಮ. ಪಾಲಕ್ ಸೊಪ್ಪು ಬಳಸಿ ಸೂಪ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಬೇಕಾಗುವ ಸಾಮಗ್ರಿಗಳು
ಪಾಲಕ್ ಸೊಪ್ಪು
ಹಾಲು
ಅಕ್ಕಿ ಹಿಟ್ಟು
ಸಕ್ಕರೆ
ಕಾಳು ಮೆಣಸಿನ ಪುಡಿ
ಈರುಳ್ಳಿ
ಬೆಳ್ಳುಳ್ಳಿ
ಉಪ್ಪು
ಎಣ್ಣೆ
ಮಾಡುವ ವಿಧಾನ
ಒಂದು ತವಾದಲ್ಲಿ ಎಣ್ಣೆ ಕಾಯಲು ಇಡಿ. ನಂತರ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ನಂತರ ಪಾಲಕ್ ಸೊಪ್ಪು ಹಾಕಿ ತಿರುವಿ. ಇದು ಚೆನ್ನಾಗಿ ಬೆಂದ ಮೇಲೆ ಸ್ವಲ್ಪ ಅಕ್ಕಿ ಹಿಟ್ಟು, ಕಾಳು ಮೆಣಸು ಪೌಡರ್, ಸಕ್ಕರೆ, ಉಪ್ಪು ಮತ್ತು ಒಂದು ಕಪ್ ನೀರು ಹಾಕಿ. ಇದನ್ನು 10 ನಿಮಿಷ ಕುದಿಯಲು ಬಿಡಿ.
ನಂತರ ಈ ಮಿಶ್ರಣವನ್ನು ಸೋಸಿಕೊಳ್ಳಿ. ಸೋಸಿದ ಮೇಲೆ ಸಿಕ್ಕಿದ ರಸವನ್ನು ಹಾಲು ಸೇರಿಸಿ 2 ನಿಮಿಷ ಬಿಸಿ ಮಾಡಿ ನಂತರ ಸೇವಿಸಿ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ