Webdunia - Bharat's app for daily news and videos

Install App

ಒಮ್ಮೆ ಮಾಡಿ ನೋಡಿ ಕ್ಯಾರೆಟ್ ಕ್ಯಾಪ್ಸಿಕಮ್ ಚಪಾತಿ

Webdunia
ಬುಧವಾರ, 19 ಸೆಪ್ಟಂಬರ್ 2018 (19:57 IST)
ಈಗೀಗ ಊಟದ ಜೊತೆ ಚಪಾತಿಯನ್ನು ತಿನ್ನುವುದು ಸರ್ವೇಸಾಮಾನ್ಯವಾಗಿದೆ. ಹಾಗಾಗಿ ನಾನಾ ವಿಧದ ಚಪಾತಿಗಳನ್ನು ನಾವು ಕಾಣಬಹುದಾಗಿದೆ. ಅದರಲ್ಲಿಯೂ ಕ್ಯಾರೆಟ್ ಕ್ಯಾಪ್ಸಿಕಮ್ ಚಪಾತಿಯು ರುಚಿಗೆ ಹೇಳಿ ಮಾಡಿಸಿದ ಪದಾರ್ಥವಾಗಿದೆ. ಒಮ್ಮೆ ಮಾಡಿ ರುಚಿ ಸವಿಯಿರಿ
ಬೇಕಾಗುವ ಸಾಮಗ್ರಿಗಳು :
 
ಗೋಧಿ ಹಿಟ್ಟು 2 ಕಪ್
ಕ್ಯಾರೆಟ್ 1
ಕ್ಯಾಪ್ಸಿಕಮ್ 1 
ರುಚಿಗೆ ತಕ್ಕಷ್ಟು ಉಪ್ಪು
ಕಿಚನ್‌ಕಿಂಗ್ ಮಸಾಲಾ - 1 ಚಮಚ
ಅಚ್ಚ ಖಾರದ ಪುಡಿ
ಎಣ್ಣೆ 1/2 ಕಪ್
 
ಮಾಡುವ ವಿಧಾನ :
 
ಮೊದಲು ಕ್ಯಾಪ್ಸಿಕಮ್ ಅನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಮತ್ತು ಕ್ಯಾರೆಟ್ ಅನ್ನು ತುರಿದುಕೊಳ್ಳಬೇಕು. ನಂತರ ಒಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಅದು ಕಾದ ಮೇಲೆ ಹೆಚ್ಚಿಟ್ಟ ಕ್ಯಾಪ್ಸಿಕಮ್ ಮತ್ತು ಕ್ಯಾರೆಟ್ ಅನ್ನು ಹಾಕಿ 5 ನಿಮಿಷ ಫ್ರೈ ಮಾಡಬೇಕು. ನಂತರ ಸ್ವಲ್ಪ ನೀರು, ಉಪ್ಪು, ಕಿಚನ್‌ಕಿಂಗ್ ಮಸಾಲಾ, ಅಚ್ಚ ಖಾರದ ಪುಡಿ ಹಾಕಿ ಬೇಯಿಸಬೇಕು. ಅದು ಅರ್ಧ ಬೆಂದರೆ ಸಾಕು. ನಂತರ ಇದು ಬಿಸಿ ಕಮ್ಮಿ ಆದ ಮೇಲೆ ಗೋಧಿ ಹಿಟ್ಟನ್ನು ಸೇರಿಸಿ ಚಪಾತಿಯ ಹಿಟ್ಟನ್ನು ಕಲೆಸಬೇಕು. ನಂತರ ಉಂಡೆ ಮಾಡಿಕೊಂಡು ಎಣ್ಣೆ ಸವರಿಕೊಂಡ ಪ್ಲಾಸ್ಟಿಕ್ ಮೇಲೆ ಚಪಾತಿಯನ್ನು ಲಟ್ಟಿಸಿ ಕಾದ ಕಾವಲಿಯ ಮೇಲೆ ಹಾಕಿ ಮೀಡಿಯಮ್ ಉರಿಯಲ್ಲಿ ಬೇಯಿಸಬೇಕು. ಆದರೆ ಬೇಯಿಸುವಾಗ ಸ್ವಲ್ಪ ಎಣ್ಣೆಯನ್ನು ಹಾಕಬೇಕು. ಈಗ ಬಿಸಿ ಬಿಸಿಯಾದ ರುಚಿ ರುಚಿಯಾದ ಕ್ಯಾರೆಟ್ ಕ್ಯಾಪ್ಸಿಕಮ್ ಚಪಾತಿ ಸವಿಯಲು ಸಿದ್ಧ. ಇದನ್ನು ಹಾಗೆಯೇ ತಿನ್ನಲೂ ರುಚಿಯಾಗಿರುತ್ತದೆ ಅಥವಾ ಚಟ್ನಿ ಜೊತೆಯಲ್ಲಿಯೂ ತಿನ್ನಬಹುದು.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments