Select Your Language

Notifications

webdunia
webdunia
webdunia
webdunia

ಹೊಸ ರುಚಿ ಬಾಳೆಹಣ್ಣಿನ ಪಾಯಸ

ಬಾಳೆಹಣ್ಣಿನ ಪಾಯಸ
ವಿಶೇಷವೇನಿಲ್ಲ, ಆದರೂ ರುಚಿಯಾಗಿ ಎನಾದರೂ ತಿನ್ನಬೇಕು ಅನ್ನಿಸುತ್ತದೆ.

ಸಿಹಿಯಾಗಿ ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ. ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಅಂತ ಬಾಳೆಹಣ್ಣಿನ ಪಾಯಸ ಮಾಡಬಹುದು.
 
ಬೇಕಾಗುವ ಸಾಮಗ್ರಿಗಳು


* ಪಚ್ಚ ಬಾಳೆಹಣ್ಣು- 2
* ಹೆಸರುಬೇಳೆ- ಅರ್ಧ ಕಪ್
* ತುಪ್ಪ- ಅರ್ಧ ಕಪ್
* ಗೋಡಂಬಿ, ದ್ರಾಕ್ಷಿ- ಸ್ವಲ್ಪ
* ಹಸಿ ತೆಂಗಿನಕಾಯಿ – ಸ್ವಲ್ಪ
* ಪುಡಿ ಬೆಲ್ಲ- 1 ಕಪ್
* ತೆಂಗಿನಹಾಲು- ಅರ್ಧ ಕಪ್
* ಏಲಕ್ಕಿ ಪುಡಿ – ಸ್ವಲ್ಪ

ಮಾಡುವ ವಿಧಾನ

* ಬಾಳೆಹಣ್ಣನ್ನು  ಕತ್ತರಿಸಿಟ್ಟುಕೊಳ್ಳಬೇಕು. ಹೆಸರುಬೇಳೆಯನ್ನು ಪರಿಮಳ ಬರುವರೆಗೆ ಹುರಿದುಕೊಂಡು ಮೆತ್ತಗೆ ಬೇಯಿಸಿಕೊಳ್ಳಿ. '

* ಒಂದು ಪಾತ್ರೆಗೆ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ, ತೆಂಗಿನಕಾಯಿಯನ್ನು ಹುರಿದು ತೆಗೆದಿಡಿ.

* ಕತ್ತರಿಸಿಕೊಂಡ ಬಾಳೆಹಣ್ಣನ್ನು ಉಳಿದ ತುಪ್ಪದಲ್ಲಿ ಹಾಕಿ ಪ್ರೈ ಮಾಡಿಕೊಳ್ಳಬೇಕು. 

* ಬೆಲ್ಲ, ನೀರು, ಬೆಂದ ಹೆಸರುಬೇಳೆ, ಬಾಳೆಹಣ್ಣು, ತೆಂಗಿನ ಹಾಲನ್ನು ಹಾಕಿ ಒಂದು ನಿಮಿಷ ಕುದಿಸಿ. ಹುರಿದ ಗೋಡಂಬಿ, ತೆಂಗಿನಚೂರು ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ರುಚಿಕರವಾದ ಬಾಳೆಹಣ್ಣಿನ ಪಾಯಸ ಸವಿಯಲು ಸಿದ್ಧವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಲ್ಲುಗಳನ್ನು ಬಿಳಿಯಾಗಿಸುವುದು ಹೇಗೆ?