ಬೆಂಗಳೂರು : ಸಂಜೆಯ ಹೊತ್ತಿನ ಟೀ ಕುಡಿಯಲು ಬೊಂಡಾ ಇದ್ದರೆ ಉತ್ತಮವಾಗಿರುತ್ತದೆ. ಆದಕಾರಣ ಸಂಜೆ ಟೀ ಜೊತೆಯಲ್ಲಿ ಸವಿಯಲು ಮೈಸೂರು ಬೊಂಡಾ ಮಾಡಿ.
ಬೇಕಾಗುವ ಸಾಮಾಗ್ರಿಗಳು : ¼ ಕೆ.ಜಿ.ಮೈದಾ ಹಿಟ್ಟು, 200 ಎಂಎಲ್ ಮೊಸರು, 1/ ಚಮಚ ಅಡುಗೆ ಸೋಡಾ, 2 ಹಸಿಮೆಣಸಿನ ಕಾಯಿ, ½ ಇಂಚು ಶುಂಠಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ½ ಚಮಚ ಜೀರಿಗೆ, ಎಣ್ಣೆ, ಉಪ್ಪು.
ಮಾಡುವ ವಿಧಾನ : ಮೈದಾ ಹಿಟ್ಟಿಗೆ ಕೊತ್ತಂಬರಿ ಸೊಪ್ಪು, ಅಡುಗೆ ಸೋಡಾ, ಹಸಿಮೆಣಸಿನ ಕಾಯಿ, ಶುಂಠಿ, ಜೀರಿಗೆ, ಉಪ್ಪು, ಮೊಸರು ಹಾಕಿ , ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಖಾದ ಎಣ್ಣೆಯಲ್ಲಿ ಕರಿಯಿರಿ.