Webdunia - Bharat's app for daily news and videos

Install App

ಮಿಕ್ಸ್‌ಡ್ ವೆಜಿಟೇಬಲ್ ಕುರ್ಮಾ

Webdunia
ಶುಕ್ರವಾರ, 2 ನವೆಂಬರ್ 2018 (16:43 IST)
ವೆಜಿಟೇಬಲ್ ಕುರ್ಮಾವು ಚಪಾತಿಗೆ ಮತ್ತು ಪುರಿಗೆ ಒಳ್ಳೆಯ ಕಾಂಬಿನೇಶನ್. ಇದನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಂಡು ಸವಿಯಬಹುದು. ಹೇಗೆ ಅಂತೀರಾ.. ನೀವೂ ಒಮ್ಮೆ ಟ್ರೈ ಮಾಡಿ ನೋಡಿ..

ಬೇಕಾಗುವ ಸಾಮಗ್ರಿಗಳು :
 
 (ಮಸಾಲೆಗೆ)
* ಜೀರಿಗೆ 1 ಚಮಚ
* ಕೊತ್ತಂಬರಿ ಬೀಜ 1 ಚಮಚ
* ಚಕ್ಕೆ
* ಲವಂಗ 2
* ಏಲಕ್ಕಿ 2
* ಒಣ ಮೆಣಸಿನಕಾಯಿ 4
 
(ತರಕಾರಿ)
* ಬಟಾಣಿ
*ಬೀನ್ಸ್
* ಕ್ಯಾರೆಟ್
* ಆಲೂಗಡ್ಡೆ
* ಕ್ಯಾಪ್ಸಿಕಂ
* ಟೊಮೆಟೊ 2 (ಪೇಸ್ಟ್ ಮಾಡಲು)
* ಈರುಳ್ಳಿ 1
* ಬೆಳ್ಳುಳ್ಳಿ 4
* ಶುಂಠಿ
* ಹಸಿ ಮೆಣಸಿನಕಾಯಿ 2
* ತುಪ್ಪ 2 ಚಮಚ
* ನೀರು
* ರುಚಿಗೆ ತಕ್ಕಷ್ಟು ಉಪ್ಪು
 
ತಯಾರಿಸುವ ವಿಧಾನ :
 
ಮೊದಲು ಎಲ್ಲಾ ತರಕಾರಿಗಳನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ನಂತರ ಟೊಮೆಟೊವನ್ನು ತೊಳೆದು ಮಿಕ್ಸಿಯಲ್ಲಿ ಪೇಸ್ಟ್ ಮಾಡಬೇಕು. ನಂತರ ಒಂದು ಪ್ಯಾನ್‌ನಲ್ಲಿ ಮಸಾಲೆ ಸಾಮಾನನ್ನು ಎಲ್ಲಾ ಹುರಿದು ಆರಿದ ಮೇಲೆ ಅದನ್ನು ಮಿಕ್ಸಿ ಮಾಡಬೇಕು. ನಂತ ಮಿಕ್ಸಿ ಮಾಡಿದ ಮಸಾಲೆಗೆ ಕಟ್ ಮಾಡಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹಾಕಿ ಇನ್ನೊಂದು ಸಾರಿ ಮಿಕ್ಸಿ ಮಾಡಿಟ್ಟುಕೊಳ್ಳಬೇಕು. ನಂತರ ಅದೇ ಪ್ಯಾನ್‌ನಲ್ಲಿ ತುಪ್ಪ ಹಾಕಿ ರುಬ್ಬಿದ ಮಸಾಲೆಯನ್ನು ಹಾಕಿ ಆಮೇಲೆ ಟೊಮೆಟೊ ಪೇಸ್ಟ್ ಹಾಕಿ ಆಮೇಲೆ ಅದಕ್ಕೆ ಈಗಾಗಲೇ ಕಟ್ ಮಾಡಿದ ತರಕಾರಿ, ಹಸಿಮೆಣಸನ್ನು ಹಾಕಿ ಸ್ವಲ್ಪ ನೀರು ಮತ್ತು ಉಪ್ಪನ್ನು ಹಾಕಿ ಕುದಿಸಿದರೆ ರುಚಿಕರವಾದ ಮಿಕ್ಸ್‌ಡ್ ವೆಜಿಟೇಬಲ್ ಕುರ್ಮಾ ಸವಿಯಲು ಸಿದ್ಧ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments