ಬೆಂಗಳೂರು : ಮಾವಿನ ಹಣ್ಣು ಅಂದ್ರೆ ಎಲ್ಲರ ಬಾಯಲ್ಲೂ ನೀರೂರಿಸುತ್ತೆ. ಮಾವಿನ ಹಣ್ಣಿನ ಜ್ಯೂಸ್, ಮಿಲ್ಕ್ ಶೇಕ್ ಮಾಡಿ ಸವಿಯುತ್ತಾರೆ. ಹಾಗೆ ಮಾವಿನ ಹಣ್ಣಿನಿಂದ ಪಾಯಸ ಕೂಡ ಮಾಡಬಹುದು. ಮಾಡೋ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
1. ಮಾವಿನ ಹಣ್ಣು – 1
2. ಬಾಸ್ಮತಿ ಅಕ್ಕಿ – 2 ಚಮಚ
3. ಕೆನೆಭರಿತ ಹಾಲು – ಎರಡೂವರೆ ಕಪ್
4. ಸಕ್ಕರೆ – 3 ಚಮಚ
5. ಬಾದಾಮಿ – 5
6. ಕೇಸರಿ – ಸ್ವಲ್ಪ
7. ಪಿಸ್ತಾ – 1 ಚಮಚ (ಸಣ್ಣಗೆ ತುಂಡರಿಸಿದ್ದು)
ಮಾಡುವ ವಿಧಾನ:
* ಎರಡು ಪ್ರತ್ಯೇಕ ಕಪ್‍ಗಳಲ್ಲಿ ಬಾದಾಮಿ ಮತ್ತು ಅಕ್ಕಿಯನ್ನು ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕೆಲ ನಿಮಿಷಗಳ ಕಾಲ ನೆನೆಸಿಡಿ.
* ಒಂದು ಕಪ್ ನಲ್ಲಿ 4 ಚಮಚದಷ್ಟು ಬೆಚ್ಚಗಿನ ಹಾಲು ತೆಗೆದುಕೊಂಡಿ ಅದಕ್ಕೆ ಕೇಸರಿ ಎಲೆಗಳನ್ನು ಹಾಕಿಡಿ.
* ಬಾದಾಮಿ ಮೇಲಿನ ಸಿಪ್ಪೆಯನ್ನು ತೆಗೆದಿಟ್ಟುಕೊಳ್ಳಿ.
* ಮಿಕ್ಸಿ ಜಾರಿಗೆ ಅಕ್ಕಿ, ಬಾದಾಮಿ ಮತ್ತು ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿಕೊಳ್ಳಿ.
* ಒಂದು ಪಾತ್ರೆಯಲ್ಲಿ ಹಾಲನ್ನು ಕೆನೆ ಬರುವವರೆಗೆ ಕುದಿಸಿ ನಂತರ ಅದಕ್ಕೆ ಗ್ರೈಂಡ್ ಮಾಡಿರೋ ಅಕ್ಕಿ ಮತ್ತು ಬಾದಾಮಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿ.
* ಹಾಲು ಗಟ್ಟಿಯಾಗುವ ಹಂತಕ್ಕೆ ಬಂದಾಗ ಸಕ್ಕರೆ ಬೆರೆಸಿ.
* ನಂತರ ಕೇಸರಿ ಹಾಕಿರೋ ಹಾಲನ್ನ ಅದಕ್ಕೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ.
* ಮಾವಿನ ಹಣ್ಣಿನ ಸಿಪ್ಪೆ ತೆಗೆದು ಅದನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
* ಕುದಿಯುತ್ತಿರುವ ಪಾಯಸಕ್ಕೆ ಮಾವಿನ ಹಣ್ಣಿನ ಪೇಸ್ಟ್ ಹಾಕಿ, ಮತ್ತೆ ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ಕೊನೆಗೆ ಪಾಯಸವನ್ನ ಒಲೆಯಿಂದ ಕೆಳಗಿಳಿಸಿ, ಸರ್ವಿಂಗ್ ಗ್ಲಾಸ್/ಕಪ್‍ಗೆ ಹಾಕಿ ಅದರ ಮೇಲೆ ಸಣ್ಣಗೆ ಕಟ್ ಮಾಡಿದ ಬಾದಾಮಿ, ಪಿಸ್ತಾ ಹಾಕಿದ್ರೆ ಮಾವಿನ ಹಣ್ಣಿನ ಪಾಯಸ ಸವಿಯಲು ಸಿದ್ಧ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ