ಪನ್ನೀರನ್ನು ಚೌಕಾಕಾದದಲ್ಲಿ ಸಾಮಾನ್ಯ ಗಾತ್ರದಲ್ಲಿ ಕತ್ತರಿಸಿಟ್ಟುಕೊಳ್ಳಬೇಕು ನಂತರ ಒಂದು ಪಾತ್ರೆಯನ್ನು ತೆಗೆದುಕೊಂಡು ಮೈದಾಹಿಟ್ಟು, ಜೋಳದ ಪುಡಿ, ಗೋದಿಹಿಟ್ಟು, ಮೆಣಸಿನಪುಡಿ, ಉಪ್ಪು ಹಾಕಿ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಒಂದು ಬಾಣೆಲೆಗೆ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಿ ನಂತರ ಕಲಿಸಿದ ಪನ್ನೀರನ್ನು ಎಣ್ಣೆಯಿಂದ ಹುರಿಯಿರಿ. ಚೆನ್ನಾಗಿ ಹುರಿದ ನಂತರ ಅದನ್ನು ಒಂದೆಡೆಯಲ್ಲಿ ಎತ್ತಿಟ್ಟುಕೊಳ್ಳಿ. ಇನ್ನೊಂದು ಬಾಣೆಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ ಸೊಪ್ಪು, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ಮತ್ತು ಕತ್ತರಿಸಿದ ಕ್ಯಾಪ್ಸಿಕಮ್ ಹಾಕಿ ಚೆನ್ನಾಗಿ ಹುರಿಯಿರಿ ಅದಕ್ಕೆ ಪೆಪ್ಪರ್ ಪುಡಿ, ಖಾರ ಬೇಕಿದ್ದಲ್ಲಿ ಸ್ವಲ್ಪ ಖಾದರ ಪುಡಿ, ಚಿಲ್ಲಿ ಸಾಸ್, ಟೊಮೆಟೊ ಸಾಸ್ ಹಾಕಿ ಕಲಸಿ ಹೀಗೆ ಕಲಸುವಾಗ ಉರಿಯು ಸಣ್ಣದಾಗಿರಲಿ. ತಯಾರಿಸಿದ ಪನ್ನೀರ್ ಮಂಚೂರಿಯನ್ನು ತಟ್ಟೆಗೆ ಹಾಕಿ ಕೊತ್ತಂಬರಿ ಸೊಪ್ಪನ್ನು ಮೇಲೆಡೆಯಿಂದ ಉದುರಿಸಿ, ಬೇಕಾದರೆ ಕಡ್ಡಿ ಚುಚ್ಚಿ ಫೋರ್ಕ್ ಇಟ್ಟು ತಿನ್ನಲು ನೀಡಿ.