Select Your Language

Notifications

webdunia
webdunia
webdunia
webdunia

ಜೀರಾ ರೈಸ್

ಜೀರಾ ರೈಸ್
ವೈವಿಧ್ಯಮಯ ರೈಸ್ ಬಾತ್‌ಗಳನ್ನು ದಿನನಿತ್ಯ ನಾವು ಸೇವಿಸುತ್ತಲೇ ಇರುತ್ತೇವೆ. ಆದರೆ ಜೀರಾ ರೈಸ್‌ನ ರುಚಿಯೇ ಬೇರೆ ತರಹದ್ದಾಗಿದೆ. ಮಾಡಲೂ ಸುಲಭವಾದ ಜೀರಾ ರೈಸ್ ಮನೆಯಲ್ಲಿ ಹೇಗೆ ಮಾಡಬಹುದು ಎಂದು ತಿಳಿಸಿಕೊಡ್ತೀವಿ.. ನೀವೂ ಒಮ್ಮೆ ಟ್ರೈ ಮಾಡಿ ನೋಡಿ..
ತಯಾರಿಸಲು ಬೇಕಾಗುವ ಸಾಮಗ್ರಿಗಳು :
* ಭಾಸುಮತಿ ಅಕ್ಕಿ 1 ಕಪ್
* ಎಣ್ಣೆ 1 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ತುಪ್ಪ 2 ಚಮಚ
* ಜೀರಿಗೆ 2 ಚಮಚ
* ಕೊತ್ತಂಬರಿ ಸೊಪ್ಪು ಸ್ವಲ್ಪ
* ಅಕ್ಕಿ ಬೇಯಿಸಲು ನೀರು 5 ಕಪ್
 
ತಯಾರಿಸುವ ವಿಧಾನ :
 ಮೊದಲು ಭಾಸುಮತಿ ಅಕ್ಕಿಯನ್ನು 20 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಬಾಣಲೆಗೆ 5 ಕಪ್ ನೀರನ್ನು ಹಾಕಿ ಆ ನೀರಿಗೆ ಉಪ್ಪು ಮತ್ತು ಎಣ್ಣೆಯನ್ನು ಹಾಕಿ ನೀರನ್ನು ಕುದಿಸಬೇಕು. ನಂತರ ನೆನೆಸಿದ ಅಕ್ಕಿಯ ನೀರನ್ನೂ ತೆಗೆದು ಕುದಿಯುತ್ತಿರುವ ನೀರಿಗೆ ಹಾಕಬೇಕು. ಅದನ್ನು 8 ರಿಂದ 10 ನಿಮಿಷ ಬೇಯಿಸಬೇಕು. ನಂತರ ಹೆಚ್ಚಿನ ನೀರನ್ನು ಜರಡಿಯನ್ನು ಉಪಯೋಗಿಸಿ ಬಸಿಯಬೇಕು.

ಇದನ್ನು ಮಾಡುವುದರಿಂದ ಅನ್ನ ಉದುರಾಗಿರುತ್ತದೆ. ನಂತರ ಬಾಣಲೆಗೆ 2 ಚಮಚ ತುಪ್ಪವನ್ನು ಹಾಕಿ ಅದು ಬಿಸಿಯಾದಾಗ ಅದಕ್ಕೆ ಜೀರಿಗೆಯನ್ನು ಹಾಕಿ ಹುರಿಯಬೇಕು. ನಂತರ ಅದಕ್ಕೆ ಅನ್ನವನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ 1/4 ಚಮಚದಷ್ಟು ಉಪ್ಪನ್ನು ಹಾಕಿ ಮಿಶ್ರಣ ಮಾಡಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿಯಾದ ಸುಲಭವಾಗಿ ಮಾಡಬಹುದಾದ ಜೀರಾ ರೈಸ್ ಸವಿಯಲು ಸಿದ್ಧ.  ಇದರೊಂದಿಗೆ ದಾಲ್ ಫ್ರೈಯನ್ನೂ ತಯಾರಿಸಿಕೊಂಡು ಸವಿದರೆ ಇನ್ನೂ ರುಚಿ ಜಾಸ್ತಿ.. 

Share this Story:

Follow Webdunia kannada

ಮುಂದಿನ ಸುದ್ದಿ

ಅತಿಯಾಗಿ ನಿದ್ದೆ ಮಾಡುವುದು ಅಪಾಯಕಾರಿನಾ!!!!