ಬೆಂಗಳೂರು : ಹಲಸಿನ ಹಣ್ಣು ಎಲ್ಲರೂ ಇಷ್ಟಡುತ್ತಾರೆ. ಇದರಿಂದ ಹಲವು ಬಗೆಯ ಸಿಹಿತಿಂಡಿಗಳನ್ನು ತಯಾರಿಸಬಹುದು. ಹಾಗೇ ದೋಸೆ ಕೂಡ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಬೇಕಾಗುವ ಸಾಮಾಗ್ರಿಗಳು : ಹಲಸಿನ ಹಣ್ಣಿನ ತೊಳೆ 20, ½ ಕಪ್ ಅಕ್ಕಿ, ¼ ಕಪ್ ಬೆಲ್ಲ, ½ ತೆಂಗಿನಕಾಯಿ, ಉಪ್ಪು, 3 ಏಲಕ್ಕಿ, ಎಣ್ಣೆ.
ಮಾಡುವ ವಿಧಾನ : ಅಕ್ಕಿಯನ್ನು 2 ಗಂಟೆಗಳ ಕಾಲ ನೆನೆಹಾಕಿ. ಬಳಿಕ ಈ ಅಕ್ಕಿಯನ್ನು ಚೆನ್ನಾಗಿ ತೊಳೆದು ತೆಂಗಿನ ಕಾಯಿ, ಏಲಕ್ಕಿ, ಉಪ್ಪು, ಬೆಲ್ಲ ಸೇರಿಸಿ ರುಬ್ಬಿ. ಹಾಗೇ ಹಲಸಿನ ಹಣ್ಣಿನ ತೊಳೆಯನ್ನು ರುಬ್ಬಿ ಪೇಸ್ಟ್ ತಯಾರಿಸಿಕೊಂಡಿರಿ. ಇವೆರಡು ರುಬ್ಬಿದ ಮಿಶ್ರಣವನ್ನು ಸೇರಿಸಿ ಮಿಕ್ಸ್ ಮಾಡಿ 10 ನಿಮಿಷ ಹಾಗೇ ಇಡಿ. ಬಳಿಕ ತವಾ ಬಿಸಿ ಮಾಡಿ ಎಣ್ಣೆ ಸವರಿ ದೋಸೆ ಹರಡಿದರೆ ಹಲಸಿನ ಹಣ್ಣಿನ ದೋಸೆ ರೆಡಿ.