ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಏನಾದರೂ ಸಿಹಿ ತಿಂಡಿಯನ್ನು ಮಾಡಲು ನೀವು ಬಯಸಿದರೆ ಅಥವಾ ನಿಮಗೇ ತಕ್ಷಣವೇ ಏನಾದರೂ ಸಿಹಿ ತಿಂಡಿಯನ್ನು ತಿನ್ನಬೇಕು ಎನಿಸಿದರೆ ಈ ದಿಢೀರ್ ಹಲ್ವಾವನ್ನು ಮಾಡಬಹುದಾಗಿದೆ.
ಅತಿ ಶೀಘ್ರವಾಗಿ ಮತ್ತು ಕಡಿಮೆ ಸಾಮಗ್ರಿಗಳಲ್ಲಿ ನೀವು ಈ ರುಚಿಯಾದ ಹಲ್ವಾವನ್ನು ಮಾಡಿಕೊಳ್ಳಬಹುದು. ನಿಮಗೆ ಇಷ್ಟವಾಗುವ ಡ್ರೈ ಫ್ರೂಟ್ಸ್‌ಗಳನ್ನು ಇದರಲ್ಲಿ ಸೇರಿಸಿಕೊಳ್ಳಬಹುದಾಗಿದೆ. ಈ ದಿಢೀರ್ ಕಡಲೆ ಹಿಟ್ಟಿನ ಹಲ್ವಾ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಈ ಲೇಖನವನ್ನು ಓದಿ.
ಬೇಕಾಗುವ ಸಾಮಗ್ರಿಗಳು:
ಕಡಲೆ ಹಿಟ್ಟು - 1/2 ಕಪ್
ತುಪ್ಪ - 1/4 ಕಪ್
ಸಕ್ಕರೆ - 3/4 ಕಪ್
ಹಾಲು - 1 ಕಪ್
ಏಲಕ್ಕಿ ಪುಡಿ - 1 ಚಮಚ
ಗೋಡಂಬಿ - 8-10
ಬಾದಾಮಿ - 8-10
ಮಾಡುವ ವಿಧಾನ:
ಒಂದು ಪ್ಯಾನ್ ತೆಗೆದುಕೊಂಡು 1/4 ಕಪ್ ತುಪ್ಪವನ್ನು ಹಾಕಿ ಅದು ಬಿಸಿಯಾದಾಗ ಸಣ್ಣ ಉರಿಯಲ್ಲಿ ಕಡಲೆ ಹಿಟ್ಟನ್ನು ಹಾಕಿ ಚೆನ್ನಾಗಿ ಹುರಿಯಿರಿ. ಕಡಲೆ ಹಿಟ್ಟು ಹುರಿದು ಅದರ ಪರಿಮಳ ಬರುವವರೆಗೂ ಹುರಿದು ಅದಕ್ಕೆ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಅದಕ್ಕೆ ಹಾಲನ್ನು ಹಾಕಿ ಅದನ್ನು ಮಿಕ್ಸ್ ಮಾಡುತ್ತಲಿರಿ. ಈ ಮಿಶ್ರಣ ಚೆನ್ನಾಗಿ ಬೆಂದು ಪ್ಯಾನ್‌ನ ತಳವನ್ನು ಬಿಟ್ಟಾಗ ಸ್ಟೌ ಆಫ್ ಮಾಡಿ ಅದಕ್ಕೆ ಬಾದಾಮಿ ಮತ್ತು ಗೋಡಂಬಿಯ ಚೂರುಗಳನ್ನು ಮಿಕ್ಸ್ ಮಾಡಿಕೊಂಡರೆ ಕಡಲೆ ಹಿಟ್ಟಿನ ದಿಢೀರ್ ಹಲ್ವಾ ರೆಡಿಯಾಗುತ್ತದೆ. ನೀವೂ ಇದನ್ನೊಮ್ಮೆ ಪ್ರಯತ್ನಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.