ಗೋಧಿ ಹಿಟ್ಟಿನಲ್ಲಿ ಅಗತ್ಯವಾದ ವಿಟಮಿನ್‌ಗಳು, ಮಿನರಲ್‌ಗಳು ಇರುವುದರಿಂದ ಇದು ಆರೋಗ್ಯಕ್ಕೆ ಉತ್ತಮ. ಅದರಲ್ಲೂ ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬನ್ನಿ ಇಂತಹ ಆರೋಗ್ಯಕರ ಗೋಧಿ ಹಿಟ್ಟಿನ ಲಡ್ಡುವನ್ನು ಸುಲಭವಾಗಿ ಮನೆಯಲ್ಲಿ ಮಾಡುವುದು ಹೇಗೆ ಎಂದು ನೋಡೋಣ
ಬೇಕಾಗುವ ಸಾಮಗ್ರಿಗಳು
1/2 ಕೆ.ಜಿ. - ಗೋಧಿ ಹಿಟ್ಟು
1/2 ಕೆ.ಜಿ - ಸಕ್ಕರೆ (ಮಿಕ್ಸಿಗೆ ಹಾಕಿ ಪುಡಿ ಮಾಡಿ)
200 ಗ್ರಾಂ ತುಪ್ಪ
ಬಾದಾಮಿ/ಗೋಡಂಬಿ ಚೂರು - ಕಪ್ (ಐಚ್ಛಿಕ)
ಮಾಡುವ ವಿಧಾನ
* ಬಾಣಲೆಯಲ್ಲಿ ಗೋಧಿ ಹಿಟ್ಟು ಮತ್ತು ತುಪ್ಪವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ
* ನಂತರ ಹುರಿದ ಗೋಧಿ ಹಿಟ್ಟಿಗೆ ಸಕ್ಕರೆ ಪುಡಿ ಮತ್ತು ಬಾದಾಮಿ/ಗೋಡಂಬಿ ಚೂರು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ