ಬೆಂಗಳೂರು : ಅಲಸಂಡೆ ಆರೋಗ್ಯಕ್ಕೆ ಉತ್ತಮ. ಇದನ್ನು ಸಾಂಬಾರ್, ಪಲ್ಯ ಮಾಡಲು ಬಳಸುತ್ತಾರೆ. ಇದು ತುಂಬಾ ರುಚಿಕರವಾಗಿರುತ್ತದೆ. ಆದಕಾರಣ ಇದರಿಂದ ಸುಲಭವಾಗಿ ತಯಾರಾಗುವಂತಹ ಅಲಸಂಡೆ ಉಸಲಿ ತಯಾರಿಸಿ.
ಬೇಕಾಗುವ ಸಾಮಾಗ್ರಿಗಳು : ಅಲಸಂಡೆ ಕಾಳು 1 ಕಪ್, ¼ ಚಮಚ ಜೀರಿಗೆ, 2 ಚಮಚ ಎಣ್ಣೆ, ½ ಚಮಚ ಸಾಸಿವೆ, ಚಿಟಿಕೆ ಇಂಗು, 2 ಹಸಿಮೆಣಸಿನ ಕಾಯಿ, ಸ್ವಲ್ಪ ಕರಿಬೇವು, ಸ್ವಲ್ಪ ಕೊತ್ತಂಬರಿ ಸೊಪ್ಪು, ½ ಕಪ್ ತುರಿದ ತೆಂಗಿನ ಕಾಯಿ.
ಮಾಡುವ ವಿಧಾನ : ಮೊದಲಿಗೆ ಅಲಸಂಡೆ ಕಾಳುಗಳನ್ನು 6 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ. ಬಳಿಕ ಇದಕ್ಕೆ ನೀರು ಮತ್ತು ಜೀರಿಗೆ ಮಿಕ್ಸ್ ಮಾಡಿ ಬೇಯಿಸಿ. ಬಳಿಕ ನೀರನ್ನು ಸೋಸಿ. ಆಮೇಲೆ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಇಂಗು, ಹಸಿಮೆಣಸಿನಕಾಯಿ, ಕರಿಬೇವು, ಹಾಕಿ ಒಗ್ಗರಣೆ ಹಾಕಿ ಅದಕ್ಕೆ ಬೇಯಿಸಿಟ್ಟ ಹಲಸಂಡೆ ಕಾಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ನೀರಿನಾಂಶವೆಲ್ಲಾ ಆವಿಯಾದ ಬಳಿಕ ತೆಂಗಿನ ತುರಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿದರೆ ಹಲಸಂಡೆ ಉಸಲಿ ರೆಡಿ.