Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಮಕ್ಕಳ ಮೆಚ್ಚಿನ ಹಲ್ವಾ

ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಮಕ್ಕಳ ಮೆಚ್ಚಿನ ಹಲ್ವಾ
ಬೆಂಗಳೂರು , ಬುಧವಾರ, 27 ಮೇ 2020 (08:53 IST)
Normal 0 false false false EN-US X-NONE X-NONE

ಬೆಂಗಳೂರು : ಲಾಕ್ ಡೌನ್ ನ ಈ ಸಮಯದಲ್ಲಿ ಮಕ್ಕಳು ಮನೆಯಲ್ಲಿಯೇ ಹಠ ಮಾಡುತ್ತಿರುತ್ತಾರೆ. ಆಗ ಅವರಿಗೆ ಮನೆಯಲ್ಲಿ ಈ ಹಲ್ವಾ ತಯಾರಿಸಿ ನೀಡಿದರೆ ಅವರು ಖುಷಿ ಪಡುತ್ತಾರೆ.

 

ಬೇಕಾಗುವ ಸಾಮಾಗ್ರಿಗಳು: ½ ಕಪ್ ಕಾರ್ನ್ ಪ್ಲೋರ್, ¼ ಕಪ್ ಸಕ್ಕರೆ, 3 ಟೇಬಲ್ ಚಮಚ ತುಪ್ಪ ಅಥವಾ ಎಣ್ಣೆ, ನಿಂಬೆ ಹಣ್ಣು, ಫುಡ್ ಕಲರ್, ನಟ್ಸ್.

 

ಮಾಡುವ ವಿಧಾನ : ½ ಕಪ್ ಕಾರ್ನ್ ಪ್ಲೋರ್ ಗೆ 2 ಕಪ್ಪ ನೀರನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು  ಅದಕ್ಕೆ 1 ಕಪ್ ನೀರು ಹಾಗೂ ¼ ಕಪ್ ಸಕ್ಕರೆ ಹಾಕಿ ಸಕ್ಕರೆ ಕರಗುವ ತನಕ ಚೆನ್ನಾಗಿ ಕುದಿಸಿ. ಇದಕ್ಕೆ 2-3 ಹನಿ ನಿಂಬೆ ರಸ ಹಾಕಿ, ಮಿಕ್ಸ್ ಮಾಡಿಟ್ಟ ಕಾರ್ನ್ ಪ್ಲೋರ್ ಹಾಕಿ ಕೈಯಾಡಿಸುತ್ತೀರಿ. ಅದು ಗಟ್ಟಿಯಾಗುತ್ತಿದ್ದಂತೆ ಅದಕ್ಕೆ ಫುಡ್ ಕಲರ್ ಹಾಕಿ ಮಿಕ್ಸ್ ಮಾಡಿ ಮತ್ತೆ ಕೈಯಾಡಿಸಿ ಬಳಿಕ ಅದಕ್ಕೆ 3 ಟೇಬಲ್ ಚಮಚ ತುಪ್ಪ ಅಥವಾ ಎಣ್ಣೆ ಮಿಕ್ಸ್ ಮಾಡಿ.  ಅದು ಗಟ್ಟಿಯಾಗುತ್ತಿದ್ದಂತೆ ಅದಕ್ಕೆ ನಟ್ಸ್ ಗಳನ್ನು ಮಿಕ್ಸ್ ಮಾಡಿ. ಬಳಿಕ ಮತ್ತೊಂದು ಪಾತ್ರೆಗೆ ಎಣ್ಣೆ ಹಚ್ಚಿ ಈ ಮಿಶ್ರಣವನ್ನು ಸುರಿಯಿರಿ. 2 ಗಂಟೆಯ ಬಳಿಕ ಅದನ್ನು ಕತ್ತರಿಸಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ತಯಾರಿಸಲು ಇದನ್ನು ಬಳಸಿ