ಮೊದಲು ಮೈದಾ ಹಿಟ್ಟು ಮತ್ತು ಚಿರೋಟಿ ರವೆಯನ್ನು ಬೆರೆಸಬೇಕು. ನಂತರ ಅದಕ್ಕೆ 2 ಚಮಚ ತುಪ್ಪ, ಉಪ್ಪು ಮತ್ತು ಅಗತ್ಯವಿರುವಷ್ಟು ನೀರನ್ನು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಬೇಕು. ಇದನ್ನು ಒದ್ದೆ ಬಟ್ಟೆಯಿಂದ 1 ಗಂಟೆ ಮುಚ್ಟಿಡಬೇಕು. ನಮತರ ಬಾದಾಮಿ, ಗೋಡಂಬಿ, ಪಿಸ್ತಾ ಮತ್ತು ಗಸಗಸೆಗಳನ್ನು ಒಂದು ಬಾಣಲೆಯಲ್ಲಿ 2 ನಿಮಿಷ ಹುರಿಯಬೇಕು. ನಂತರ ಹುರಿದ ಪದಾರ್ಥಗಳನ್ನು ಹುರಿಗಡಲೆಪುಡಿ, ಸಕ್ಕರೆ, ಏಲಕ್ಕಿ ಮತ್ತು ಸಕ್ಕರೆಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ನಂತರ ಮೈದಾ ಹಿಟ್ಟನ್ನು ಚೆನ್ನಾಗಿ ನಾದಬೇಕು.
ನಂತರ ಒಂದು ಹದವಾದ ಗಾತ್ರದಲ್ಲಿ ಉಂಡೆಗಳನ್ನು ಮಾಡಬೇಕು. ಒಂದೊಂದೇ ಉಂಡೆಗಳನ್ನು ತೆಳ್ಳಗೆ ಮತ್ತು ದುಂಡಗೆ ಲಟ್ಟಿಸಬೇಕು. ನಂತರ ಇದರಲ್ಲಿ ಒಂದರಿಂದ 2 ಚಮಚ ಹೂರಣವನ್ನು ಹಾಕಿ ಮಡಚಬೇಕು. ನಂತರ ಹೂರಣ ತುಂಬಿದ ಕರ್ಜಿಕಾಯಿಯನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಕರಿಯಬೇಕು. ಇದನ್ನು ಸಣ್ಣ ಉರಿಯಲ್ಲಿ ಬೇಯಿಸಿದರೆ ಗರಿಗರಿಯಾಗಿರುತ್ತದೆ.