ಬೆಂಗಳೂರು : ಸಂಜೆ ಟೀ ಕುಡಿಯುವಾಗ ಅದರ ಜೊತೆಗೆ ತಿನ್ನಲು ಏನಾದರೂ ರುಚಿಕರವಾದ ತಿನಿಸು ಇದ್ದರೆ ಚೆನ್ನಾಗಿರುತ್ತದೆ ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ಹಾಗಾದ್ರೆ ಸಂಜೆ ಟೀ ಜೊತೆಗೆ ಸೋಯಾಬೀನ್ ಕಬಾಬ್ ತಯಾರಿಸಿ ತಿನ್ನಿ.
ಬೇಕಾಗುವ ಸಾಮಾಗ್ರಿಗಳು:
ಸೋಯಾಬೀನ್ 10-15, ಶುಂಠಿ-ಬೆಳ್ಲುಳ್ಳಿ ಪೇಸ್ಟ್ 1 ಚಮಚ, ಹಸಿಮೆಣಸಿನಕಾಯಿ 4, ಈರುಳ್ಳಿ 1, ಕೊತ್ತಂಬರಿ ಸೊಪ್ಪು ಸ್ವಲ್ಪ, ಖಾರದ ಪುಡಿ ½ ಚಮಚ, ಗರಂ ಮಸಾಲ 1 ಚಮಚ, ಕಾಳು ಮೆಣಸಿನ ಪುಡಿ ½ ಚಮಚ, ಎಣ್ನೆ 3-4 ಚಮಚ, ಮೊಸರು 3 ಚಮಚ, ಉಪ್ಪು ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:
ಸೋಯಾಬೀನ್ ನ್ನು 10 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ನೆನೆಸಿ, ಬಳಿಕ ಅದನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಶುಂಠಿ-ಬೆಳ್ಲುಳ್ಳಿ ಪೇಸ್ಟ್ ಹಾಕಿ ಆಮೇಲೆ ಹಸಿಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪು ಮೂರರಿಂದ ಪೇಸ್ಟ್ ತಯಾರಿಸಿ ಅದನ್ನು ಸೋಯಾಬೀನ್ ಜೊತೆ ಮಿಕ್ಸ್ ಮಾಡಿ. ಬಳಿಕ ಖಾರದ ಪುಡಿ, ಗರಂ ಮಸಾಲ, ಮೊಸರು, ಕಾಳು ಮೆಣಸಿನ ಪುಡಿ, ರುಚಿಗೆ ತಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ½ ಗಂಟೆಗಳ ಕಾಲ ಇಡಿ.
ಬಳಿಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಅದರಲ್ಲಿ ಸೋಯಾಬೀನ್ ನನ್ನು 10 ನಿಮಿಷಗಳ ಕಾಲ ಪ್ರೈ ಮಾಡಿದರೆ ಸೋಯಾಬೀನ್ ಕಬಾಬ್ ರೆಡಿ.