ಬೆಂಗಳೂರು: ಗಣೇಶನ ಪೂಜೆ ಹೆಚ್ಚಾಗಿ ಹೆಸರುಬೇಳೆ ಪಂಚಕಜ್ಜಾಯವನ್ನು ಇಡುತ್ತಾರೆ. ಈ ಹೆಸರುಬೇಳೆ ಪಂಚಕಜ್ಜಾಯ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು : ಹೆಸರುಬೇಳೆ ½ ಕಪ್, ಬೆಲ್ಲ ¼ ಕಪ್, ತೆಂಗಿನತುರಿ ½ ಕಪ್, ಏಲಕ್ಕಿಪುಡಿ ¼ ಚಮಚ, ಗೋಡಂಬಿ 8-10, ತುಪ್ಪ 1 ಚಮಚ.
ಮಾಡುವ ವಿಧಾನ : ಮೊದಲಿಗೆ ಹೆಸರುಬೇಳೆಯನ್ನು ಚೆನ್ನಾಗಿ ಹುರಿಯಿರಿ. ಆಮೇಲೆ ಇನ್ನೊಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ತೆಂಗಿನ ತುರಿ ಮತ್ತು ಬೆಲ್ಲ ವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಅದಕ್ಕೆ ಏಲಕ್ಕಿ ಪುಡಿ, ಹುರಿದ ಹೆಸರುಬೇಳೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ತುಪ್ಪದಲ್ಲಿ ಗೋಡಂಬಿ ಹುರಿದು ಹಾಕಿದರೆ ಪಂಚಕಜ್ಜಾಯ ರೆಡಿ.