Select Your Language

Notifications

webdunia
webdunia
webdunia
webdunia

ದೇಶಿ ಶೈಲಿಯ ರುಚಿಕರ ಹಸಿ ಕೈ ಗೊಜ್ಜು

ಹಸಿ ಕೈ ಗೊಜ್ಜು
ಹಳ್ಳಿಯಲ್ಲಿ ಮುದ್ದೆಯ ಜೊತೆ ತುಂಬಾ ಇಷ್ಟವಾಗುವಂತಹ ರೆಸಿಪಿ. ಇದು ಕೇವಲ ಕೆಲವೇ ವರ್ಗಕ್ಕೆ ಇಷ್ಟವಾಗುವಂತಹದ್ದಲ್ಲ.

ತುಂಬಾ ಸಿಂಪಲ್ ರೆಸಿಪಿ ಎಲ್ಲರು ಇಷ್ಟಪಡುತ್ತಾರೆ. ಬಾಯಿಗೆ ಮರೆಯಲಾಗದಂತಹ ಅಡುಗೆ. ಇಂದು ನಾವು ಹೇಳಿಕೊಡುತ್ತಿರುವ ಸಾರಿನ ಹೆಸರು ‘ಹಸಿ ಕೈ ಗೊಜ್ಜು’.

ಈ ಸಾರನ್ನು ಮುದ್ದೆ, ಅನ್ನದ ಜೊತೆ ಸವಿದರೆ ಬಹಳ ರುಚಿಯಾಗಿರುತ್ತೆ. ಸಿಟಿಯಲ್ಲೆ ಇದ್ದವರಿಗೆ ಈ ಸಾರಿನ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಅದಕ್ಕೆ ಇಂದು ನೀವು ನಿಮ್ಮ ಮನೆಯಲ್ಲಿ ‘ಹಸಿ ಕೈ ಗೊಜ್ಜು’ ಟ್ರೈ ಮಾಡಿ ರುಚಿ ನೋಡಿ. ಇದನ್ನು ಮಾಡುವುದು ತುಂಬಾ ಸುಲಭ.

ಬೇಕಾಗಿರುವ ಸಾಮಾಗ್ರಿಗಳು

* ಬದನೆಕಾಯಿ – 2
* ಟೊಮೊಟೊ – 1
* ಕಟ್ ಮಾಡಿದ ಈರುಳ್ಳಿ – 1
* ಮೆಣಸಿನಕಾಯಿ – 5
* ಹುಣಸೆಹಣ್ಣು – 1/4 ಗ್ರಾಂ
* ಜೀರಿಗೆ – 1/4 ಟೀಸ್ಪೂನ್
* ಕೊತ್ತಂಬರಿ ಸೊಪ್ಪು – 1/2 ಟೀಸ್ಪೂನ್
* ರುಚುಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

* ಮೊದಲಿಗೆ ಹುಣಸೆಹಣ್ಣನ್ನು ನೀರಿನಲ್ಲಿ ನೆನಸಿಡಿ.
* ಬದನೆಕಾಯಿಯನ್ನು ಚಾಕುವಿನಿಂದ ಚುಚ್ಚಿ ಅದನ್ನು ಗ್ಯಾಸ್ ಉರಿಯಲ್ಲಿ ಬೇಯಿಸಿ. ಅದೇ ರೀತಿ ಟೊಮೆಟೊ ಮತ್ತು ಮೆಣಸಿನಕಾಯಿಯನ್ನು ಬೇಯಿಸಿ ಪಕ್ಕಕ್ಕೆ ಇಡಿ.
* ಒಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಟೊಮೆಟೊ, ಮೆಣಸಿನಕಾಯಿ ಹಾಗೂ ಬದನೆಕಾಯಿ ಹಾಕಿ ಸಂಪೂರ್ಣ ಮೆತ್ತಗೆ ಆಗುವವರೆಗೂ ಫ್ರೈ ಮಾಡಿ.
* ಈಗ ಫ್ರೈಗೆ ಈರುಳ್ಳಿ, ಹುಣಸೆಹಣ್ಣು ಹಾಗೂ ಉಪ್ಪು ಹಾಕಿ ಅಂತಿಮವಾಗಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗ್ಗಿನ ಉಪಹಾರಕ್ಕೆ ರುಚಿಕರವಾದ ಕೇರಳ ಶೈಲಿಯ ಅಪ್ಪಂ