Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಸೌತೇಕಾಯಿಗೆ ಉಪ್ಪು ಹಾಕಿಕೊಂಡು ತಿನ್ನಲು ಗೊತ್ತು. ಆದರೆ ಅದನ್ನು ಬಳಸಿ ರೊಟ್ಟಿ ಮಾಡಬಹುದು. ರೊಟ್ಟಿಗೆ ಒಂದು ವಿಶಿಷ್ಟ ಘಮ ಕೊಡಲು ಸೌತೇಕಾಯಿ ಬಳಸಬಹುದು. ಹೇಗೆಂದು ನೋಡಿಕೊಳ್ಳಿ.
ಬೇಕಾಗುವ ಸಾಮಗ್ರಿಗಳು
ಸೌತೇಕಾಯಿ
ಅಕ್ಕಿ
ಉಪ್ಪು
ಕರಿಬೇವು
ಮಾಡುವ ವಿಧಾನ
ಅಕ್ಕಿಯನ್ನು ನೆನೆ ಹಾಕಿ ರುಬ್ಬಿಕೊಳ್ಳಿ. ಸೌತೇಕಾಯಿಯನ್ನು ತುರಿದುಕೊಳ್ಳಿ. ಅಕ್ಕಿ ಹಿಟ್ಟಿಗೆ ತುರಿದ ಸೌತೇಕಾಯಿ ರುಚಿಗೆ ತಕ್ಕಷ್ಟು ಉಪ್ಪು, ಹೆಚ್ಚಿದ ಕರಿಬೇವು ಹಾಕಿಕೊಂಡು ರೊಟ್ಟಿ ತಟ್ಟಿಕೊಳ್ಳಿ. ಇದನ್ನು ಕಾದ ಕಾವಲಿ ಮೇಲೆ ಹಾಕಿ ಬೇಯಿಸಿ. ಸೌತೇಕಾಯಿ ರೊಟ್ಟಿಗೆ ವಿಶೇಷ ಘಮ ಕೊಡುತ್ತದೆ. ಇದನ್ನು ಕಾಯಿ ಚಟ್ನಿ ಜತೆ ಸವಿಯಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ