ಟೀ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲಿಯೂ ಜೋರಾದ ಮಳೆ ಬರುವಾಗ ಬಿಸಿ ಬಿಸಿ ಚಾ ಕುಡಿಯುವ ಮಜವೇ ಬೇರೆ. ಆದರೆ ದಿನವೂ ಒಂದೇ ರೀತಿಯ ಚಾ ಕುಡಿದು ಬೇಜಾರಾಗಿದ್ದರೆ ಚಾಕೋಲೇಟ್ ಟೀ ತಯಾರಿಸಿ ಸವಿಯಬಹುದು. ಈ ಟೀ ಮಕ್ಕಳಿಂದ ಹಿಡಿದು ದೊಡ್ಡವರ ತನಕವೂ ಇಷ್ಟವಾಗಬಹುದು. ಹಾಗಾದರೆ ಹೇಗೆ ತಯಾರಿಸುವುದು ಎಂದು ಹೇಳ್ತೀವಿ.. ನೀವೂ ಒಮ್ಮೆ ಟ್ರೈ ಮಾಡಿ ನೋಡಿ...
ತಯಾರಿಸಲು ಬೇಕಾಗುವ ಸಾಮಗ್ರಿಗಳು :
* ಹಾಲು 3/4 ಕಪ್
* ನೀರು 1/4 ಕಪ್
* ಸಕ್ಕರೆ 2 ಚಮಚ
* ಟೀ ಪೌಡರ್ 1 ಚಮಚ
* ಚಾಕೋಲೇಟ್ ಪೌಡರ್ 1/2 ಚಮಚ
ತಯಾರಿಸುವ ವಿಧಾನ :
ಮೊದಲು ಒಂದು ಪಾತ್ರೆಯಲ್ಲಿ ಹಾಲು ಮತ್ತು ನೀರನ್ನು ಹಾಕಿ ಅದರ ಜೊತೆಗೆ ಟೀ ಪೌಡರ್ ಅನ್ನು ಹಾಕಿ ಎರಡು ನಿಮಿಷ ಕುದಿಸಬೇಕು. ನಂತರ ಸಕ್ಕರೆ ಮತ್ತು ಚಾಕೋಲೇಟ್ ಪೌಡರ್ ಹಾಕಿ ಸಣ್ಣ ಉರಿಯಲ್ಲಿ ಎರಡು ನಿಮಿಷ ಕುದಿಸಬೇಕು. ನಂತರ ಕುದಿ ಬಂದ ಟೀಯನ್ನು ಗ್ಲಾಸ್‌ಗಳಲ್ಲಿ ಹಾಕಿದರೆ ರುಚಿಯಾದ ಚಾಕೋಲೇಟ್ ಟೀ ಸವಿಯಲು ಸಿದ್ಧ.