ಬೆಳಿಗ್ಗೆ ಅಥವಾ ಹಿಂದಿನ ದಿನ ಮಾಡಿದ ಚಪಾತಿ ಹಾಗೆಯೇ ಉಳಿದಿದ್ದರೆ ಅದನ್ನು ಚೆಲ್ಲುವ ಬದಲು ಸಂಜೆಯ ಸಮಯದಲ್ಲಿ ಚಾಟ್ ಮಾಡಿಕೊಂಡು ತಿನ್ನಬಹುದು. ಇದರಿಂದ ಚಪಾತಿ ಹಾಳಾಗುವುದೂ ತಪ್ಪುತ್ತದೆ, ಬೇರೆ ರೀತಿಯ ತಿಂಡಿಯನ್ನೂ ಮಾಡಿದಂತಾಗುತ್ತದೆ ಮತ್ತು ಮಕ್ಕಳೂ ಸಹ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಉಳಿದಿರುವ ಚಪಾತಿಯಿಂದ ಚಾಟ್ಸ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಲೇಖನವನ್ನು ಓದಿ.
ಬೇಕಾಗುವ ಸಾಮಗ್ರಿಗಳು:
ಚಪಾತಿ - 2-3
ಈರುಳ್ಳಿ - 1
ಟೊಮೆಟೋ - 1
ಕೊತ್ತಂಬರಿ ಸೊಪ್ಪು - ಒಂದು ಹಿಡಿ
ಅಚ್ಚಖಾರದ ಪುಡಿ - 1 ಚಮಚ
ಚಾಟ್ ಮಸಾಲಾ - 1/2 ಚಮಚ
ಸೇವ್ - ಸ್ವಲ್ಪ
ಉಪ್ಪು - ರುಚಿಗೆ
ಮಾಡುವ ವಿಧಾನ:
* ಚಪಾತಿಗಳನ್ನು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಕರಿದುಕೊಳ್ಳಿ.
* ಈರುಳ್ಳಿ, ಟೊಮೆಟೋ ಮತ್ತು ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.
* ಒಂದು ಬೌಲ್‌ನಲ್ಲಿ ಹೆಚ್ಚಿದ ತರಕಾರಿಗಳು, ಅಚ್ಚಖಾರದ ಪುಡಿ, ಚಾಟ್ ಮಸಾಲಾ, ಉಪ್ಪು ಮತ್ತು ಕರಿದಿರುವ ಚಪಾತಿ ಚೂರುಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ನಂತರ ಅದನ್ನು ಒಂದು ಪ್ಲೇಟ್‌ನಲ್ಲಿ ಹಾಕಿ ಸೇವ್ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿಕೊಂಡರೆ ಚಪಾತಿ ಚಾಟ್ ರೆಡಿ.
ಸರಳವಾಗಿ ಮತ್ತು ಶೀಘ್ರವಾಗಿ ಮಾಡಿಕೊಳ್ಳಬಹುದಾದ ಇದನ್ನು ನೀವೂ ಪ್ರಯತ್ನಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.