ಪ್ರತಿದಿನ ಎಲ್ಲರಿಗೂ ಕಾಡುವ ಪ್ರಶ್ನೆ ಎಂದರೆ ರುಚಿಕರವಾದ ಮತ್ತು ವೈವಿಧ್ಯಮಯವಾದ ತಿಂಡಿ ಏನು ರೆಡೀ ಮಾಡೋದು ಎಂದು ಚಿಂತೆ ಬೇಡ.
ರುಚಿಕರವಾದ ಹೊಸ ರುಚಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ಹೊಸ ರುಚಿಯನ್ನು ನೀವು ಕೂಡ ಒಮ್ಮೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು
* ಶೇಂಗಾ- ಅರ್ಧ ಕಪ್
* ಕಡಲೆಬೇಳೆ- 1 ಚಮಚ
* ಮೆಣಸು- 1 ಚಮಚ
* ಜೀರಿಗೆ- 1 ಚಮಚ
* ಕರಿಬೇವು ಸ್ವಲ್ಪ
* ಒಣಮೆಣಸಿನಕಾಯಿ- ಮೂರು
* ಅಡುಗೆ ಎಣ್ಣೆ- ಅರ್ಧ ಕಪ್ ಮಾಡುವ ವಿಧಾನ
* ಒಂದು ಬಾಣಲೆಯನ್ನು ಬಿಸಿಗಿಟ್ಟು ಅದಕ್ಕೆ ಮೂರರಿಂದ ನಾಲ್ಕು ಚಮಚ ಎಣ್ಣೆ ಸೇರಿಸಿ ಸಾಸಿವೆ, ಕಡಲೆಬೇಳೆ, ಶೇಂಗಾವನ್ನು ಹುರಿದು ನಂತರ ಪುಡಿ ಮಾಡಿಕೊಂಡಿರಬೇಕು.
* ಅಡುಗೆ ಎಣ್ಣೆ,ಹುರಿದ ಮಸಾಲೆ, ಕರಿಬೇವು, ಒಣಮೆಣಸಿನಕಾಯಿ, ಅರ್ಧ ಚಮಚ ಇಂಗು ಸೇರಿಸಿ ಒಗ್ಗರಣೆ ತಯಾರಿಸಿ.
* ಇದಕ್ಕೆ ಮೊದಲೇ ತಯಾರಿಸಿದ ಅನ್ನವನ್ನು ಸೇರಿಸಿ ಕಾಲು ಚಮಚ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ.
*ಬೇಕಿದ್ದಲ್ಲಿ ಅರ್ಧ ನಿಂಬೆ ರಸ ಸೇರಿಸಿಕೊಳ್ಳಬಹುದು. ಚೆನ್ನಾಗಿ ಕಲೆಸಿದ ನಂತರ ಅನ್ನವನ್ನು 2 ನಿಮಿಷ ಬಿಸಿ ಮಾಡಿದರೆ ರುಚಿಯಾದ ಶೇಂಗಾ ಬಾತ್ ಸವಿಯಲು ಸಿದ್ಧವಾಗುತ್ತದೆ.