Webdunia - Bharat's app for daily news and videos

Install App

ಸಿಹಿಯಾದ ರುಚಿಯಾದ ಬಾಸುಂದಿಯನ್ನು ಮಾಡಿ ನೋಡಿ..

ನಾಗಶ್ರೀ ಭಟ್
ಶುಕ್ರವಾರ, 2 ಫೆಬ್ರವರಿ 2018 (19:12 IST)
ಬಾಸುಂದಿ ಇದು ಉತ್ತರ ಭಾರತದ ಕಡೆ ಹೆಚ್ಚಾಗಿ ಮಾಡುವ ಹಾಲಿನಿಂದ ತಯಾರಿಸುವ ಸಿಹಿಯಾದ ತಿಂಡಿ. ಹಾಲಿನಿಂದ ತಯಾರಿಸುವ ಸಿಹಿ ತಿಂಡಿಗಳು ಎಲ್ಲರಿಗೂ ಇಷ್ಟವಾಗುತ್ತದೆ. ಹಾಲಿನೊಂದಿಗೆ ಬಾದಾಮಿ, ಗೋಡಂಬಿ, ಪಿಸ್ತಾವನ್ನು ಸೇರಿಸಿ ಮಾಡುವುದರಿಂದ ರುಚಿಯಾಗಿಯೂ ಇರುತ್ತದೆ ಮತ್ತು ಬಹಳಷ್ಟು ಪ್ರೋಟೀನ್ ಅನ್ನು ಹೊಂದಿರುತ್ತದೆ. ಹಾಲಿನಿಂದ ಮಾಡುವ ತಿಂಡಿಯಾಗಿರುವುದರಿಂದ ಇದನ್ನು ಚಿಕ್ಕ ಮಕ್ಕಳಿಗೂ ಸಹ ಕೊಡಬಹುದು. ಮಾಡಲು ಬಹಳ ಸುಲಭವಾದ ಈ ತಿಂಡಿಯನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ.
ಬೇಕಾಗುವ ಸಾಮಗ್ರಿಗಳು:
 
ಹಾಲು - 2 ಲೀಟರ್
ಪಿಸ್ತಾ - 8-10
ಬಾದಾಮಿ - 8-10
ಗೋಡಂಬಿ - 8-10
ಕೇಸರಿ - 1/2 ಚಮಚ
ಸಕ್ಕರೆ - 1/2 ಕಪ್
ಏಲಕ್ಕಿ ಪುಡಿ - 1/4 ಚಮಚ
 
ಮಾಡುವ ವಿಧಾನ:
 
ಒಂದು ಪ್ಯಾನ್ ತೆಗೆದುಕೊಂಡು ಮಧ್ಯಮ ಉರಿಯಲ್ಲಿ ಸ್ಟೌಮೆಲಿಟ್ಟು 2 ಲೀಟರ್ ಹಾಲನ್ನು ಹಾಕಿ ಕುದಿಸಿ. ಹಾಲು ಚೆನ್ನಾಗಿ ಕುದಿಯುತ್ತಿರುವಾಗ ಅದಕ್ಕೆ ಚಿಕ್ಕಚಿಕ್ಕ ಚೂರುಗಳನ್ನಾಗಿ ಮಾಡಿದ ಬಾದಾಮಿ, ಪಿಸ್ತಾ ಮತ್ತು ಗೋಡಂಬಿಯನ್ನು ಹಾಕಿ ಹಾಲನ್ನು ಚೆನ್ನಾಗಿ ತೊಳೆಸುತ್ತಿರಿ. ಹಾಲು ಕೆನೆ ಕಟ್ಟಿದಂತೆ ಅದನ್ನು ಒಂದು ಕಡೆ ಮಾಡಿ ಮತ್ತೆ ತೊಳೆಸುವುದನ್ನು ಮುಂದುವರಿಸಿ. ಹೀಗೆ ಮಾಡುತ್ತಾ ಹಾಲು ಕ್ರೀಮ್‌ನ ಹದಕ್ಕೆ ಬರುತ್ತದೆ.
 
ನಂತರ ಹಾಲಿನ ಕೆನೆಯನ್ನೆಲ್ಲಾ ಅದರಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ 1/2 ಕಪ್ ಸಕ್ಕರೆ ಮತ್ತು ಕೇಸರಿಯನ್ನು ಹಾಕಿ. ಸಕ್ಕರೆಯು ಕರಗಿದ ನಂತರ 5-10 ನಿಮಿಷ ಹಾಗೆಯೇ ಮಿಕ್ಸ್ ಮಾಡುತ್ತಿರಿ. ಹಾಲು ಗಟ್ಟಿಯಾಗುತ್ತಾ ಬಂದಂತೆ ಅದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ ಮಿಕ್ಸ್ ಮಾಡಿ ಸ್ಟೌ ಆಫ್ ಮಾಡಿದರೆ ಬಿಸಿಬಿಸಿಯಾದ ಬಾಸುಂದಿ ರೆಡಿಯಾಗುತ್ತದೆ. ಸ್ವಲ್ಪ ಬಿಸಿಯಿರುವಾಗಲೇ ತಿನ್ನಲು ಕೊಡಿ. ರುಚಿಯಾದ ಮತ್ತು ಸರಳವಾಗಿ ಮಾಡಿಕೊಳ್ಳಬಹುದಾದ ಬಾಸುಂದಿಯನ್ನು ನೀವೂ ಒಮ್ಮೆ ಮಾಡಿ ನೋಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments