ಸಾಮಾನ್ಯವಾಗಿ ಬಾಳೆಹಣ್ಣು ಎಲ್ಲರ ಮನೆಯಲ್ಲಿಯೂ ಸಿಗುವಂತಹ ಹಣ್ಣಾಗಿದೆ. ಬಾಳೆಹಣ್ಣಿನಿಂದ ಮಾಡುವ ಖಾದ್ಯಗಳೂ ಬಲು ರುಚಿಕರವಾಗಿರುತ್ತದೆ. ನಾವು ಮನೆಯಲ್ಲಿಯೇ ಸುಲಭವಾಗಿ ರುಚಿಕರವಾದ ಬಾಳೆಹಣ್ಣು ಮತ್ತು ಖರ್ಜೂರವನ್ನು ಬಳಸಿ ಮಿಲ್ಕ್ ಶೇಕ್ ಅನ್ನು ತಯಾರಿಸಿಕೊಂಡು ಸವಿಯಬಹುದು. ಹಾಗಾದರೆ ಇದನ್ನು ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ.
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಖರ್ಜೂರ 10
* ಬಾಳೆಹಣ್ಣು 3
* ಸಕ್ಕರೆ 4 ಟೀ ಚಮಚ
* ಐಸ್‌ಕ್ಯೂಬ್ ಸ್ವಲ್ಪ
* ಗಟ್ಟಿ ಹಾಲು 1/2 ಲೀಟರ್
ತಯಾರಿಸುವ ವಿಧಾನ:
ಮೊದಲು ಮಿಕ್ಸಿಯಲ್ಲಿ ಬೀಜ ತೆಗೆದ ಖರ್ಜೂರ, ಸಕ್ಕರೆ ಮತ್ತು ಹಾಲನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಅದಕ್ಕೆ ಬಾಳೆಹಣ್ಣನ್ನು ಸೇರಿಸಿ ಮತ್ತು ಐಸ್‌ಕ್ಯೂಬ್ ಅನ್ನು ಸೇರಿಸಿ ಸ್ವಲ್ಪ ನುಣ್ಣಗಾಗಿಸಿಕೊಳ್ಳಬೇಕು. ಅದನ್ನು ಚೆನ್ನಾಗಿ ಮಿಶ್ರಮ ಮಾಡಿಕೊಳ್ಳಬೇಕು. ನಂತರ ಗ್ಲಾಸ್‌ನಲ್ಲಿ ಹಾಕಿ ಸರ್ವ್ ಮಾಡಿದರೆ ರುಚಿಕರವಾದ ಮತ್ತು ಆರೋಗ್ಯಕರವಾದ ಮಿಲ್ಕ್ ಶೇಕ್ ಸವಿಯಲು ಸಿದ್ದ. ಈ ಜ್ಯೂಸ್ ಡಯಟ್ ಮಾಡುವವರಿಗೆ ಬಹಳ ಉಪಯುಕ್ತವಾಗಿದೆ. (ಇದಕ್ಕೆ ಸಕ್ಕರೆ ಹಾಕದೇ ಇದ್ದರೂ ಚೆನ್ನಾಗಿರುತ್ತದೆ)