ಮೊದಲು ಸೇಬು ಹಣ್ಣಿನ ಸಿಪ್ಪೆಯನ್ನು ತೆಗೆದು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ಒಣ ದ್ರಾಕ್ಷಿಯನ್ನು ಹುರಿಯಬೇಕು. ನಂತರ ಅಂಜೂರವನ್ನು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿಕೊಳ್ಳಬೇಕು. ನಂತರ ಒಂದು ಚಮಚ ತುಪ್ಪವನ್ನು ಒಂದು ಬಾಣಲೆಯಲ್ಲಿ ಹಾಕಿ ಸೇಬು ಹಣ್ಣನ್ನು ಬಾಡಿಸಿಕೊಳ್ಳಬೇಕು. ನಂತರ ಅರ್ಧ ಲೀಟರ್ ಹಾಲನ್ನು ಹಾಕಿ ಸೇಬು ಹಣ್ಣನ್ನು ಸೇರಿಸಿ ಕುದಿಸಬೇಕು. ಈ ಮಿಶ್ರಣವು ಚೆನ್ನಾಗಿ ಬೆಂದ ಮೇಲೆ ಉಳಿದ ಅರ್ಧ ಲೀಟರ್ ಹಾಲನ್ನು ಹಾಕಿ ಕುದಿಸಬೇಕು. ಹಾಲು ಕುದಿಯುವಾಗ ಹುರಿದ ಚಿರೋಟಿ ರವೆಯನ್ನು ಸೇರಿಸಬೇಕು. ನಂತರ ಹುರಿದ ದ್ರಾಕ್ಷಿ, ಅಂಜೂರ, ಏಲಕ್ಕಿ ಪುಡಿಯನ್ನು ಹಾಕಿ 10 ನಿಮಿಷ ಬೇಯಿಸಿದರೆ ರುಚಿಕರವಾದ ಸೇಬು ಹಣ್ಣಿನ ಪಾಯಸ ಸವಿಯಲು ಸಿದ್ಧ.