Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪೇಟಿಎಂ ಎಂಬ ಚೈನಾ ಕಂಪನಿ ಕರಾಮತ್ತು ಗೊತ್ತಾದ್ರೆ ಶಾಕ್ ಆಗ್ತೀರ

ಪೇಟಿಎಂ ಎಂಬ ಚೈನಾ ಕಂಪನಿ ಕರಾಮತ್ತು ಗೊತ್ತಾದ್ರೆ ಶಾಕ್ ಆಗ್ತೀರ
Bangalore , ಗುರುವಾರ, 1 ಡಿಸೆಂಬರ್ 2016 (09:42 IST)
ಅರೇಹಳ್ಳಿ ರವಿ
 
ಇಂದಿನಿಂದ ಮತ್ತೆ ಕ್ಯಾಶ್ ಕೊರತೆ ಶುರುವಾದಂತಿದೆ. ನಮ್ಮಲ್ಲಿ ಅಕೌಂಟ್ ಇರುವವರಿಗೆ 5 ಸಾವಿರ ಮಾತ್ರ ಕೊಡ್ತೇವೆ. 2 ಸಾವಿರದ ನೋಟು ಎರಡು ಮತ್ತು 1 ಸಾವಿರಕ್ಕೆ ನೂರರ ಚಿಲ್ಲರೆ. ಈವತ್ತು ನಮ್ಮ ಬ್ಯಾಂಕಿನಲ್ಲಿ ಜನ ಎರಡು ಸಾವಿರದ ನೋಟು ಬೇಡ ಎಂದು ತಕರಾರು ಮಾಡ್ತಿದ್ದದ್ದು ಕಂಡುಬಂತು (ಸ್ವತ: ನಾನೂ ಹಾಗೆ ಮಾಡಿದೆ. ಅವರು ಕೇರ್ ಮಾಡಲಿಲ್ಲ! 2 ಸಾವಿರದ ನೋಟೇ ಕೊಟ್ಟರು). ‘ಜನ ಲೀಗಲ್ ಕ್ಯಾಶ್ ಡೆಪಾಸಿಟ್ ಮಾಡ್ತಿಲ್ಲ ಸಾರ್ ಅದ್ಕೇ ಹಿಂಗಾಗ್ತಿದೆ’ ಎಂದು ಮ್ಯಾನೇಜರು ಅವರಿಗೆ ತಿಳಿದದ್ದನ್ನು ಹೇಳುತ್ತಾರೆ. ನಾಳೆಯಿಂದ ಕ್ಯಾಶ್ ಕೊರತೆ ಇನ್ನೂ ಹೆಚ್ಚಾಗಬಹುದು ಏನ್ಮಾಡೋದು ತಿಳೀತಿಲ್ಲ ಅಂತ ಕೊರಗುತ್ತಲೇ ‘ಹ್ಹೆ ಹ್ಹೆ ಇಲ್ಲ ಇಲ್ಲ ನಾಳೆಗೆ ಕ್ಯಾಶ್ ಸಿಕ್ಕೆ ಸಿಗಬಹುದು" ಅಂತಾ ಒಂದು ಹೋಪ್ ಇಡ್ತಾರೆ. ಜೀವನದಲ್ಲಿ ಎಂದೂ ದುಡ್ಡಿಗಾಗಿ ಗೋಗರೆಯದವರೂ ಭಿಕ್ಷೆ ಬೇಡುವವರ ಧಾಟಿಯಲ್ಲಿ ಇನ್ನೈದ್ ಸಾವ್ರ ಕೊಡಿ ಪ್ಲೀಸ್ ಅನ್ನೊದು, ನಂತರ ನನ್ ದುಡ್ ನನಗ್ ಕೊಡೋಕ್ ಎಷ್ಟ್ ಆಟ ಆಡಿಸ್ತೀರಯ್ಯ ಅಂತ ಜಗಳಕ್ಕೆ ಇಳಿಯೋದು -ಯಾವತ್ತಿನ ವಿದ್ಯಮಾನ. ದಿನಾ ಸಾಯೋರ್ಗೆ ಅಳೋರ್ಯಾರು.
 
ಪ್ರಧಾನಿಗಳೆ ಮುಂದೆ ನಿಂತು ಪ್ರಮೋಟ್ ಮಾಡಿದ ಈ ‘ಪೇಟಿಎಂ’ ಅನ್ನುವ ಆಪ್ ಬಳಕೆ ಬಹಳ ಕಡೆ ಶುರುವಾಗಿದೆ. ವ್ಯಾಪಾರಿಗಳು ಅನಿವಾರ್ಯವೆಂಬಂತೆ ಬಳಸಲು ಶುರು ಮಾಡಿದ್ದಾರೆ. ಕೇವಲ ಒಂದು ಪರ್ಸೆಂಟ್ ಕಮಿಷನ್ ಅಂತಾ ಹೇಳ್ತರಾದರೂ ಅದರ ಹೊಡೆತ ಹೆಚ್ಚಾಗೇ ಆಗುತ್ತದೆ. ನೀವು ಈವತ್ತು 5000 ಬಂಡವಾಳ ಹೂಡಿ ಸರಕುಗಳನ್ನು ತಂದು ವ್ಯಾಪಾರ ಮಾಡ್ತೀರಿ ಅದರ ಒಟ್ಟು ಲಾಭ ನೂರು ಇರುತ್ತದೆ ಎಂದಾದರೆ, ಪೂರ್ತಿ ವ್ಯಾಪಾರ ಮಾಡಿದ ನಂತರ ಒಟ್ಟೂ ಹಣವನ್ನು ಪೇಟಿಎಂ ಮೂಲಕ ಬ್ಯಾಂಕಿಗೆ ವರ್ಗಾಯಿಸುವಾಗ ಒಟ್ಟು ಕಮಿಷನ್ 51 ರೂಪಾಯಿಗಳಾಗುತ್ತವೆ. ನಮ್ಮ ಲಾಭ ನೂರು ರೂಪಾಯಿ ಬಂದಿರುತ್ತೆ. ಅದರಲ್ಲಿ ೫೧ನ್ನು ಕಮಿಷನ್ ಕೊಟ್ಟು, ಉಳಿದ 49 ನಮ್ಮ ಅಂತಿಮ ಲಾಭವಾಗುತ್ತದೆ. ಈಗ ಕಡಿಮೆ ಆಗುವ ಲಾಭವನ್ನು ಸರಿದೂಗಿಸಿಕೊಳ್ಳಲು ವ್ಯಾಪಾರಿ ಬೆಲೆ ಹೆಚ್ಚಿಸಿಕೊಳ್ಳಲೇಬೇಕಾಗುತ್ತದೆ. ಅದರ ಹೊರೆ ಗ್ರಾಹಕರ ಮೇಲೆ.
 
ಬೆಲೆ ಏರಿಕೆ ಆದಂತೆ ಹಣದುಬ್ಬರವೂ ಹೆಚ್ಚಾಗುತ್ತದೆ. 
ಇದೆಲ್ಲಾ ಬುಲ್‌ಷಿಟ್ ಕಣ್ರೀ, ಪೇಟಿಎಂ ಬಳಸಿ ವ್ಯಾಪಾರ ಹೆಚ್ಚಿಸಿಕೊಳ್ಳಬಹುದು. ಗ್ರಾಹಕರಿಗೂ ಅನುಕೂಲ. ಸ್ವಲ್ಪ ಹಣ ಹೆಚ್ಚು ಕೊಟ್ರೆ ಕೊಡೋಣ ಬಿಡಿ ಅಂತೀರಾ.. 
 
ವಿಷಯ ಇದಾವುದೂ ಅಲ್ಲ. ಪೇಟಿಎಂನ ಸುಮಾರು 40% ಮಾಲೀಕತ್ವ ಚೈನಾದ ಆಲಿಬಾಬಾ ಕಂಪನಿಯದ್ದು. ನೀವೆಲ್ಲಾ ಒಪ್ಪಿಕೊಳ್ಳುವಂತೆ ಚೈನಾ ನಮ್ಮ ಬಹುದೊಡ್ಡ ಶತ್ರು ದೇಶ (ಇಲ್ಲ; ಇಲ್ಲ. ಚೈನಾ ದೇಶದ ವಿರುಧ್ಹ ನಾವು ಎಂದಿಗೂ ಯುದ್ಧ ಹೂಡಿ ಗೆಲ್ಲಾಕ್ಕಾಗಲ್ಲವಾದ್ದರಿಂದ ಅದು ಶತ್ರು ದೇಶ ಅಲ್ಲ ಎನ್ನುವರೂ ಇದ್ದಾರೆನ್ನಿ). ಪಾಕಿಸ್ತಾನದ ಭಾರತ ವಿರುದ್ಧದ ನೀತಿಗಳು, ಭಾರತದ ವಿರುದ್ಧ ಉಗ್ರಗಾಮಿಗಳನ್ನು ತಯಾರು ಮಾಡಲಿಕ್ಕೆ, ಭಾರತದ ಒಳಗೆ ಕಳ್ಳನೋಟುಗಳನ್ನು ಹರಡಲಿಕ್ಕೆ ಚೈನಾ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡುತ್ತಿರುವುದು ಬಹಿರಂಗ ಸತ್ಯ. ನಾವು ಪೇಟಿಎಂ ಬಳಕೆ ಮಾಡಿ ಕೊಡುವ ಬಹಳಷ್ಟು ಲಾಭ ಚೈನಾದ ತಿಜೋರಿ ಸೇರಿ ಅಲ್ಲಿಂದ ಪಾಕಿಸ್ತಾನಕ್ಕೆ ಹೋಗಿ ಅದು ಟೆರರಿಸ್ಟುಗಳನ್ನು ತಯಾರಿ ಮಾಡಿ ನಮ್ಮ ಮೇಲೆ ಇನ್ನೂ ಹೆಚ್ಚೆಚ್ಚು ದಾಳಿಗಳನ್ನು ಮಾಡಬಹುದಲ್ಲವೆ.
 
ನಿನ್ನೆ ಸೇನಾ ಕಾರ್ಯಾಲಯದ ಮೇಲೆ ನಡೆದ ದಾಳಿ ನಾವು ಪೇಟಿಎಂನಂತ ಕಂಪನಿಗಳಿಗೆ ಕೊಡುವ ಹಣದಿಂದಲೂ ಫಂಡಿಂಗ್ ಆಗಿರಬಹುದಲ್ಲವೆ.. ಚೈನಾ ವಸ್ತುಗಳು ಬೇಡ ಎಂದು ಕೂಗು ಹಾಕಿ, ಚೈನಾದೇಶದ ದುಡ್ಡು ಹಾಕಿ ಲಾಭ ಮಾಡುವ ಯಾವ ಉತ್ಪನ್ನವೂ ನಮಗೆ ಬೇಡ ಎಂದು ನಾವೇಕೆ ನಿರ್ಧರಿಸುವುದಿಲ್ಲ. ಈಗ ಇರುವುದು ತಾತ್ಕಾಲಿಕವಾದ ಹಣದ ಸಂಕಷ್ಟ ಎಂದಾಗ್ಯೂ ನಾವೇಕೆ ನಮ್ಮ ದೇಶಾಭಿಮಾನವನ್ನು ಟೆಂಪೊರರಿಯಾಗಿ ಅಮಾನತಿನಲ್ಲಿಡುತ್ತೇವೆ, ವಾಲೆಟ್‌ಗೆ ಹಣ ಟ್ರಾನ್ಸ್‌ಫರ್ ಮಾಡುತ್ತೇವೆ?
 
ಯಾಕೆಂದರೆ... ವೈಯಕ್ತಿಕವಾದ ಹಣದ ತೊಂದರೆ ಎಲ್ಲಕ್ಕಿಂತ ದೊಡ್ಡದು. ಮೊದಲು ತೊಂದರೆಯ ಪರಿಹಾರಕ್ಕೆ ಎಲ್ಲರ ಗಮನ. ಅದರ ಮುಂದೆ. ದೇಶ, ಟೆರರ್ರಿಸ್ಟ್ ಅಟ್ಯಾಕುಗಳು, ಅಭಿಮಾನ ಇತ್ಯಾಗಿ ಗೌಣವಾಗುತ್ತವೆ. ದುಡ್ಡು ಕೆಟ್ಟದ್ದು ಕಾಣಾ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಚೀನಾದ ಪ್ಲಾಸ್ಟಿಕ್ ಸಕ್ಕರೆ!