Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಚೀನಾದ ಪ್ಲಾಸ್ಟಿಕ್ ಸಕ್ಕರೆ!

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಚೀನಾದ ಪ್ಲಾಸ್ಟಿಕ್ ಸಕ್ಕರೆ!
Chitradurga , ಗುರುವಾರ, 1 ಡಿಸೆಂಬರ್ 2016 (09:10 IST)
ಚೀನಾದಿಂದ ನಮ್ಮ ದೇಶಕ್ಕೆ ಅದೇನೆಲ್ಲಾ ಬರುತ್ತಿದೆಯೋ ಏನೋ ಗೊತ್ತಿಲ್ಲ. ಆದರೆ ಬಡಪಾಯಿ ಜನ ಮಾತ್ರ ಅದರ ಪರಿಣಾಮಗಳನ್ನ ಎದುರಿಸಬೇಕಾಗಿದೆ. ಮಾರುಕಟ್ಟೆಗೆ ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಬಂದ ಸುದ್ದಿ ನಡುವೆಯೇ ಈಗ ಪ್ಲಾಸ್ಟಿಕ್ ಸಕ್ಕರೆ ಬಂದಿದೆ ಎಂಬುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
 
ಚೀನಾದಿಂದ ಆಮದಾದ ಪ್ಲಾಸ್ಟಿಕ್ ಅಕ್ಕಿಯನ್ನ ಉತ್ತಮ ಗುಣಮಟ್ಟದ ಅಕ್ಕಿ ಜೊತೆ ಬೆರೆಸಿ ಮಾರಾಟ ಮಾಡಿದ್ದು ಬೆಳಕಿಗೆ ಬಂದಿತ್ತು. ಅದಾದ ಬಳಿಕ ಪ್ಲಾಸ್ಟಿಕ್ ಮೊಟ್ಟೆ ಮಾರುಕಟ್ಟೆಗೆ ಲಗ್ಗೆ ಹಾಕಿತು. ರಾಸಾಯನಿಕ ನೀರು ಬಳಸಿ ಎಲೆಕೋಸು ಬೆಳೆಸಿ ಮಾರಾಟ ಮಾಡಿದ್ದೂ ಆಯಿತು. ಈಗ ಪ್ಲಾಸ್ಟಿಕ್ ಸಕ್ಕರೆ ಲಗ್ಗೆ ಇಟ್ಟಿರುವುದು ಜನರ ನಿದ್ದೆಗೆಡಿಸಿದೆ.
 
ಪ್ಲಾಸ್ಟಿಕ್ ಸಕ್ಕರೆ ಬೆಳಕಿಗೆ ಬಂದಿರುವುದು ಚಿತ್ರದುರ್ಗ ತಾಲೂಕಿನ  ಕೋನಬೇವು ಎಂಬ ಹಳ್ಳಿಯಲ್ಲಿ. ಆ ಹಳ್ಳಿಯ ಶಿವರುದ್ರಪ್ಪ ಎಂಬುವರು ಸಕ್ಕರೆ ಖರೀದಿಸಿ ಮನೆಗೆ ತಂದು ಅದನ್ನ ಡಬ್ಬಕ್ಕೆ ತುಂವುವಾಗ ಫ್ಯಾನ್ ಗಾಳಿಗೆ ಸಕ್ಕರೆ ತೂರಿ ಹೋಗಿದೆ. ಅನುಮಾನಗೊಂಡ ಶಿವರುದ್ರಪ್ಪ ಅದನ್ನು ನೀರಿಗೆ ಹಾಕಿ ಪರೀಕ್ಷಿಸಿದಾಗ ಪ್ಲಾಸ್ಟಿಕ್ ಸಕ್ಕರೆ ತೇಲಿದೆ. ಕೂಡಲೆ ಅವರು ಆಹಾರ ಸಂರಕ್ಷಣಾ ಅಧಿಕಾರಿಯ ಜೊತೆ ಅಂಗಡಿಗೆ ಹೋಗಿ ಮಾಲೀಕರನ್ನು ತರಾಟೆ ತೆಗೆದುಕೊಂಡಿದ್ದಾರೆ.
 
ಶಿವರುದ್ರಪ್ಪ ಅವರ ದೂರಿನ ಅನ್ವಯ ಆಹಾರಾಧಿಕಾರಿಗಳು ಚಿತ್ರದುರ್ಗದ ಮಂಜುನಾಥ ಕಾಫಿ ವರ್ಕ್ ಸೇರಿದಂತೆ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಸಕ್ಕರೆ ಪ್ಯಾಕೆಟ್‌ಗಳನ್ನು ಖರೀದಿಸಿ ಪರೀಕ್ಷೆಗೆ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. 
 
ಈ ಸಕ್ಕರೆ ಬೆಳಗಾವಿಯ ರೇಣುಕಾ ಶುಗರ್ ಫ್ಯಾಕ್ಟರಿಯ ಉತ್ಪನ್ನವಾದ ಮಧುರ ಹೈಜನಿಕ್ ಸಕ್ಕರೆ ಪ್ಯಾಕೆಟ್ ಆಗಿತ್ತು. ಈ ಪ್ಲಾಸ್ಟಿಕ್ ಸಕ್ಕರೆಯ ಹಿಂದೆ ಯಾರ ಕೈವಾಡ ಇದೆ ಎಂಬುದು ತನಿಖೆಯಿಂದ ಇನ್ನಷ್ಟೇ ಗೊತ್ತಾಗಬೇಕಾಗಿದೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಲೆನೋವೋ ’ಕೆ6 ಪವರ್’ ಸ್ಮಾರ್ಟ್ ಫೋನ್ ಬಿಡುಗಡೆ