Webdunia - Bharat's app for daily news and videos

Install App

ಗಂಡನ ಮರ್ಮಾಂಗ ಕತ್ತರಿಸಿ ಕೊಂದ ಹೆಂಡತಿ!

Webdunia
ಶುಕ್ರವಾರ, 3 ಮಾರ್ಚ್ 2023 (16:12 IST)
ಭೋಪಾಲ್ : 5 ಮದ್ವೆಯಾಗಿದ್ದ ವ್ಯಕ್ತಿಯೊಬ್ಬನನ್ನ ಆತನ 5ನೇ ಹೆಂಡತಿಯೇ ಕೊಡಲಿಯಿಂದ ಕೊಚ್ಚಿ ಕೊಂದು, ಬಳಿಕ ಮರ್ಮಾಂಗ ಕತ್ತರಿಸಿ ಎಸೆದಿರುವ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ.
 
ಮೃತ ವ್ಯಕ್ತಿಯನ್ನು ಬಿರೇಂದರ್ ಗುರ್ಜರ್ ಎಂದು ಗುರುತಿಸಲಾಗಿದೆ. 5 ಮದುವೆಯಾಗಿದ್ದ ಈತನನ್ನು 5ನೇ ಪತ್ನಿ ಕಾಂಚನಾ ಗುರ್ಜರ್ ಕೊಡಲಿಯಿಂದ ಕೊಚ್ಚಿ ಹಲ್ಲೆ ಮಾಡಿದ್ದಲ್ಲದೇ, ಮೃತದೇಹ ಎಸೆಯುವ ಮುನ್ನ ಮರ್ಮಾಂಗ ಕತ್ತರಿಸಿದ್ದಾಳೆ. ಈ ಘಟನೆ ಸಿಂಗ್ರೌಲಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ.

ಕೊಲೆಯಾದ ಬಿರೇಂದ್ರ ಗುರ್ಜರ್ ಶವ ಫೆಬ್ರವರಿ 21ರಂದು ಪತ್ತೆಯಾಗಿದ್ದು, ಈ ವೇಳೆ ಆತನ ಮರ್ಮಾಂಗ ಹಾಗೂ ಕುತ್ತಿಗೆಯಲ್ಲಿ ಗಾಯಗಳಿದ್ದವು. ಶವ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಇತ್ತ ಮೃತ ಬಿರೇಂದರ್ ಪತ್ನಿ ಕಾಂಚನಾ ಗುರ್ಜರ್ ತನ್ನ ಗಂಡನ ಹತ್ಯೆ ಕುರಿತಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಳು ಎಂದು ಕೊತ್ವಾಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಇದಾದ ಬಳಿಕ ಪ್ರಕರಣದ ಹಿಂದೆ ಬಿದ್ದ ಪೊಲೀಸರು ಮೃತ ವ್ಯಕ್ತಿಯ ಸಂಬಂಧಿಗಳು ಸ್ನೇಹಿತರು ಸೇರಿದಂತೆ ಎಲ್ಲರನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದರು. ಈ ತನಿಖೆ ವೇಳೆ ಮೃತನ ಪತ್ನಿಯನ್ನು ಕೂಡ ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆ ಬಳಿಕ ಸತ್ಯ ಬಾಯ್ಬಿಟ್ಟ ಮಹಿಳೆ, ತನ್ನ ಗಂಡ ಮಾದಕ ವ್ಯಸನಿಯಾಗಿದ್ದ, ದಿನವೂ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಹೀಗಾಗಿ ಕೊಲೆ ಮಾಡಿದೆ ಎಂದು ಒಪ್ಪಿಕೊಂಡಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯಾವಾ ಕಾರಣಕ್ಕೆ ಈ ಸಂಭ್ರಮ: ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಪಾಕಿಸ್ತಾನ ಪರ ಬೇಹುಗಾರಿಗೆ: ಎನ್‌ಐಎಯಿಂದ ಯೂಟ್ಯೂಬರ್‌ ಜ್ಯೋತಿಗೆ ನಾನಾ ರೀತಿಯಲ್ಲಿ ಪ್ರಶ್ನೆ

ಕನ್ನಡ ಮಾತೇ ಆಡಲ್ಲ, ಹಿಂದಿ ರಾಷ್ಟ್ರ ಭಾಷೆ ಏನಿವಾಗ? SBI ಅಧಿಕಾರಿಯ ದರ್ಪ: video

Pahalgam Attack, ಅಂದು ಮೋದಿ ಎಚ್ಚರಿಕೆ ನೀಡುತ್ತಿದ್ದರೆ 26 ಮಂದಿಯ ಜೀವ ಉಳಿಯುತ್ತಿತ್ತು: ಮಲ್ಲಿಕಾರ್ಜುನ ಖರ್ಗೆ

ಅಂದು ನಾವು ನೀಡಿದ ಅನುದಾನದಲ್ಲಿ ಕಾಮಗಾರಿ ಮಾಡ್ತಿದ್ರೆ ಬೆಂಗಳೂರಿಗೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ: ಆರ್‌ ಅಶೋಕ್‌

ಮುಂದಿನ ಸುದ್ದಿ