Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಕ್ಬರ್, ಬಾಬರ್ ದಾಳಿಕೋರರು, ಮಹಾರಾಣಾ ಪ್ರತಾಪ್ ದೇಶಭಕ್ತ: ಯೋಗಿ ಆದಿತ್ಯನಾಥ್

ಅಕ್ಬರ್, ಬಾಬರ್ ದಾಳಿಕೋರರು, ಮಹಾರಾಣಾ ಪ್ರತಾಪ್ ದೇಶಭಕ್ತ: ಯೋಗಿ ಆದಿತ್ಯನಾಥ್
ಲಕ್ನೋ , ಬುಧವಾರ, 10 ಮೇ 2017 (19:23 IST)
ಔರಂಗಜೇಬ್ ಮತ್ತು ಬಾಬರ್ "ದಾಳಿಕೋರರು" ಯುವಕರು ಮಹಾರಾಣಾ ಪ್ರತಾಪ್ ಮುಂತಾದ ನಾಯಕರು ತೋರಿಸಿದ ಮಾರ್ಗವನ್ನು ಅನುಸರಿಸಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
 
ಒಂದು ವೇಳೆ, ಈ ಸತ್ಯವನ್ನು ಸ್ವೀಕರಿಸಿದಲ್ಲಿ ದೇಶದ ಸಮಸ್ಯೆಗಳು ನಿರ್ಮೂಲನೆಯಾಗುತ್ತವೆ ಎಂದು ತಿಳಿಸಿದ್ದಾರೆ.
 
ಮಹಾರಾಣಾ ಪ್ರತಾಪ್ ಅವರ 477ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾರಾಣಾ ಪ್ರತಾಪ್, ಗುರು ಗೋವಿಂದ್ ಸಿಂಗ್ ಮತ್ತು ಛತ್ರಪತಿ ಶಿವಾಜಿ ನಮಗೆ ಮಾದರಿಯಾಗಿದ್ದಾರೆ. ನಾವು ಅವರ ತೋರಿಸಿದ ಮಾರ್ಗವನ್ನು ಅನುಸರಿಸಬೇಕು ಎಂದು ಕರೆ ನೀಡಿದರು.
 
 ಯುವಕರು ಮಹಾರಾಣ ಪ್ರತಾಪ್‌ ಸಿಂಗ್ ಅವರ ಸ್ವಯಂ ಗೌರವ ಮತ್ತು ಸಾಮರ್ಥ್ಯದಿಂದ ಯುವಕರು ಪಾಠ ಕಲಿತುಕೊಳ್ಳಬೇಕು. ಅಕ್ಬರ್, ಔರಂಗಜೇಬ್ ಮತ್ತು ಬಾಬರ್ ಆಕ್ರಮಣಕಾರರಾಗಿದ್ದರು. ಶೀಘ್ರದಲ್ಲೇ ನಾವು ಸತ್ಯವನ್ನು ಒಪ್ಪಿಕೊಳ್ಳುತ್ತೇವೆ, ನಮ್ಮ ದೇಶದ ಎಲ್ಲಾ ಸಮಸ್ಯೆಗಳು ಕಣ್ಮರೆಯಾಗುತ್ತವೆ "ಎಂದು ಅವರು ಹೇಳಿದರು.  
 
ದೇಶದ ಶ್ರೀಮಂತ ಇತಿಹಾಸವನ್ನು ಉಳಿಸಿಕೊಳ್ಳಬೇಕು. "ಶ್ರೀಮಂತ ಇತಿಹಾಸವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರದ ಸಮುದಾಯವು ಅದರ ಭೌಗೋಳಿಕತೆಯನ್ನು ಸುರಕ್ಷಿತವಾಗಿರಿಸಿಕೊಳ್ಳುವುದಿಲ್ಲ" ಎಂದು ಭವಿಷ್ಯ ನುಡಿದರು.
 
ಉತ್ತರ ಪ್ರದೇಶ ಗವರ್ನರ್ ರಾಮ್ ನಾಯ್ಕ್ ಮತ್ತು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ. ಕೆ. ಸಿಂಗ್ ಕೂಡಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಂಬಳ ಕೇಳಿದ ಬಾಲಕನ ಕೈ ಕತ್ತರಿಸಿಹಾಕಿದ ಮಹಿಳೆ