ಮಕ್ಕಳ ಮೇಲೆ ದೌರ್ಜನ್ಯಗಳ ಮತ್ತೊಂದು ಭೀಕರವಾದ ಪ್ರಕರಣದಲ್ಲಿ, ಮಾಲೀಕಳೊಬ್ಬಳು ವೇತನ ಕೇಳಿದ 13 ವರ್ಷ ವಯಸ್ಸಿನ ಮನೆಕೆಲಸಗಾರನಾಗಿದ್ದ ಬಾಲಕನ ಕೈಯನ್ನು ಕತ್ತರಿಸಿ ಹಾಕಿದ ಹೇಯ ಘಟನೆ ವರದಿಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಇರ್ಫಾನ್ ಎಂದು ಗುರುತಿಸಲಾಗಿರುವ ಬಾಲಕ, ಸಫ್ದಾರಾಬಾದ್‌ನಲ್ಲಿರುವ ಶಫ್ಖತ್ ಬೀಬಿ ಎನ್ನುವವರ ಮನೆಯಲ್ಲಿ 3 ಸಾವಿರ ರೂ. ವೇತನಕ್ಕಾಗಿ ಉದ್ಯೋಗ ಮಾಡುತ್ತಿದ್ದ ಎಂದು ಬಾಲಕನ ತಾಯಿ ಜನ್ನಾತ್ ಬೀಬಿ ಪೊಲೀಸರಿಗೆ ತಿಳಿಸಿದ್ದಾರೆ.
ಕಳೆದ ವಾರ ಜಾನುವಾರುಗಳಿಗೆ ಮೇವು ತಿನ್ನಿಸುವ ಕೆಲಸವನ್ನು ಪೂರ್ಣಗೊಳಿಸದೆ ಸಂಬಂಳ ನೀಡುವಂತೆ ಬಾಲಕ ಇರ್ಫಾನ್ ಒತ್ತಾಯಿಸಿರುವುದು ಮನೆಯ ಮಾಲೀಕಳಾದ ಶಫ್ಖತ್ ಬೀಬಿಗೆ ಕೋಪ ತರಿಸಿದೆ. ಕೋಪದ ಭರದಲ್ಲಿ ಮೇವು ಕತ್ತರಿಸುವ ಯಂತ್ರದಿಂದ ಬಾಲಕನ ಬಲಗೈ ಕತ್ತರಿಸಿ ಪಾಠ ಕಲಿಸಿದ್ದಾಳೆ.
ಲಾಹೋರ್‌ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶೇಖುಪುರ್ ಗ್ರಾಮದಲ್ಲಿ ಇಂತಹ ಹೇಯ ಘಟನೆ ನಡೆದಿದೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಗಂಭೀರವಾಗಿದೆ ಎಂದು ಆತನ ತಾಯಿ ಜನ್ನತ್ ಬೀಬಿ ತಿಳಿಸಿದ್ದಾರೆ.
ಆದಾಗ್ಯೂ, ಸಫ್ದರಾಬಾದ್ ಪೊಲೀಸರು ಪ್ರಕರಣವನ್ನು ನೋಂದಾಯಿಸಲು ನಿರಾಕರಿಸಿದರು. ಕುಟುಂಬದವರು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿದ ಬಳಿಕ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ತೆರಳಿ ದೂರು ನೀಡಿದ ನಂತರ. ಈ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರ್ಟ್ ಪೊಲೀಸರಿಗೆ ನಿರ್ದೇಶಿಸಿತು.
ಬುಧವಾರ ಪೊಲೀಸರು ಶಾಫ್ಖತ್ ಬೀಬಿ, ಅವರ ಸಹೋದರ ಜಾಫರ್ ತಾರರ್ ಮತ್ತು ಇನ್ನಿತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಂತರ, ಅವಳ ಸಹೋದರನನ್ನು ಬಂಧಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.