Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

'ಗೋಲ್ಡನ್ ಟೆಂಪಲ್' ಎದುರು ಯೋಗ ಪ್ರದರ್ಶನ: ಯುವತಿ ವಿರುದ್ದ ಪ್ರಕರಣ ದಾಖಲು

'ಗೋಲ್ಡನ್ ಟೆಂಪಲ್' ಎದುರು ಯೋಗ ಪ್ರದರ್ಶನ: ಯುವತಿ ವಿರುದ್ದ ಪ್ರಕರಣ ದಾಖಲು

Sampriya

ಪಂಜಾಬ್ , ಭಾನುವಾರ, 23 ಜೂನ್ 2024 (15:55 IST)
Photo Courtesy X
ಪಂಜಾಬ್: ಅಂತರರಾಷ್ಟ್ರೀಯ ಯೋಗ ದಿನದಂದು ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಯೋಗ ಪ್ರದರ್ಶನ ಮಾಡಿದ ಇನ್‌ಸ್ಟಾಗ್ರಾಂ ಇನ್ಪ್ಲೂಯೆನ್ಸರ್ ಅರ್ಚನಾ ಮಕ್ವಾನಾ ವಿರುದ್ಧ ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಧಾರ್ಮಿಕ ಭಾವನೆಗಳಿಗೆ ಅವಮಾನಿಸಿದ ಆರೋಪದಲ್ಲಿ ಇದೀಗ ಅರ್ಚನಾ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295A ಅಡಿಯಲ್ಲಿ ಅರ್ಚನಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಭಾರತದಾದ್ಯಂತ ಗುರುದ್ವಾರಗಳನ್ನು ನಿರ್ವಹಿಸುವ ಸಂಸ್ಥೆಯಾದ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ ಅರ್ಚನಾ ಅವರ ನಡೆ ಸಿಖ್ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದೆ.

ತನ್ನ ಇನ್‌ಸ್ಟಾಗ್ರಾಂನಲ್ಲಿ ಪ್ರೊಫೈಲ್‌ನಲ್ಲಿ ಜೀವನಶೈಲಿ ಹಾಗೂ ಟ್ರಾವೆಲ್ ಬ್ಲಾಗ್ ಮಾಡಿ ಗುರುತಿಸಿಕೊಂಡಿರುವ  ಅರ್ಚನಾ ಅವರು ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನದಂದು ಗೋಲ್ಡನ್ ಟೆಂಪಲ್‌ನಲ್ಲಿ ಯೋಗ ಮಾಡುವ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.

ಈ ವಿಚಾರ ಗಂಭೀರವಾಗುತ್ತಿದ್ದ ಹಾಗೇ ಅರ್ಚನಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ಪೋಸ್ಟ್ ಅನ್ನು ಡಿಲೀಟ್ ಮಾಡಿ ಕ್ಷಮೆ ಕೇಳಿದ್ದಾರೆ.

"ಗುರುದ್ವಾರ ಸಾಹಿಬ್ ಆವರಣದಲ್ಲಿ ಯೋಗವನ್ನು ಅಭ್ಯಾಸ ಮಾಡುವುದು ಕೆಲವರಿಗೆ ಆಕ್ಷೇಪಾರ್ಹವಾಗಿದೆ ಎಂದು ನನಗೆ ತಿಳಿದಿರಲಿಲ್ಲ, ಏಕೆಂದರೆ ನಾನು ಅವರಿಗೆ ನನ್ನ ಗೌರವವನ್ನು ಸಲ್ಲಿಸುತ್ತಿದ್ದೇನೆ ಮತ್ತು ಯಾರಿಗೂ ಯಾವುದೇ ಹಾನಿಯನ್ನುಂಟುಮಾಡಲಿಲ್ಲ" ಎಂದು ಮಕ್ವಾನಾ ಬರೆದಿದ್ದಾರೆ.

ನನ್ನಿಂದ ಆಗಿರುವ ನೋವಿಗೆ  ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಮತ್ತು ಭವಿಷ್ಯದಲ್ಲಿ ಹೆಚ್ಚು ಜಾಗರೂಕರಾಗಿರುತ್ತೇನೆ ಎಂದು ಭರವಸೆ ನೀಡುತ್ತೇನೆ. ದಯವಿಟ್ಟು ನನ್ನ ಪ್ರಾಮಾಣಿಕ ಕ್ಷಮೆಯನ್ನು ಸ್ವೀಕರಿಸಿ ಎಂದು ಬೇಡಿಕೊಂಡಿದ್ದಾರೆ. ಅರ್ಚನಾ ಅವರು ಕ್ಷಮೆಯಾಚನೆ ಮಾಡಿದರು ಅವರಿಗೆ ಫೋನ್ ಕರೆಗಳ ಮೂಲಕ ಕೊಲೆ ಬೆದರಿಕೆಗಳನ್ನು ಸ್ವೀಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೂರಜ್ ರೇವಣ್ಣ ಪ್ರಕರಣ ಸಿಐಡಿಗೆ ಹಸ್ತಾಂತರ: ಡಾ.ಜಿ.ಪರಮೇಶ್ವರ್