Publish Date: Mon, 21 Jun 2021 (09:36 IST)
Updated Date: Mon, 21 Jun 2021 (09:39 IST)
ನವದೆಹಲಿ: ಇಂದು ವಿಶ್ವ ಯೋಗ ದಿನ. ಯೋಗ ದಿನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಯೋಗದ ಮಹತ್ವದ ಬಗ್ಗೆ ಸಂದೇಶ ನೀಡಿದ್ದಾರೆ.
ಯೋಗ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯುತ್ತಲೇ ಇವೆ. ಇಡೀ ದೇಶಕ್ಕೆ ಕೊರೋನಾ ಬಂದಾಗ ಯೋಗವೇ ನಮ್ಮನ್ನು ಕಾಪಾಡಿದ್ದು. ಇದು ನಮ್ಮ ಮಾನಸಿಕ ಆರೋಗ್ಯ ಕಾಪಾಡುತ್ತದೆ. ಇಡೀ ವಿಶ್ವಕ್ಕೆ ಕೊರೋನಾ ಬಂದಾಗ ಯೋಗವೇ ನಮ್ಮ ಮಾನಸಿಕ ಶಕ್ತಿ ವೃದ್ಧಿ ಮಾಡಿತ್ತು ಎಂದು ಮೋದಿ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
2015 ರಿಂದ ಜೂನ್ 21 ರಂದು ಜಗತ್ತಿನಾದ್ಯಂತ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವ ಯೋಗ ದಿನವನ್ನಾಗಿ ಆಚರಿಸಬೇಕೆಂಬ ಪ್ರಧಾನಿ ಮೋದಿಯವರ ಮನವಿಯನ್ನು ವಿಶ್ವ ಸಂಸ್ಥೆ ಪುರಸ್ಕರಿಸಿತ್ತು.