ವಿವಾಹಿತ ಮಹಿಳೆಯರು ಟಿವಿ ಧಾರವಾಹಿಗಳಲ್ಲಿ ಯಾವ ಮಟ್ಟಿಗೆ ಲೀನವಾಗಿರುತ್ತಾರೆ ಎಂದರೆ, ದಣಿದು ಬಂದ ಪತಿಗೆ ಟೀ ಕೊಟ್ಟು ಯೋಗಕ್ಷೇಮ ಕೇಳುವುದನ್ನು ಮರೆಯುತ್ತಾರೆ ಎಂದು ಗೋವಾದ ಕಲೆ ಮತ್ತು ಸಂಸ್ಕ್ರತಿ ಖಾತೆ ಸಚಿವ ದಯಾನಂದ್ ಮಾಂಡ್ರೆಕರ್ ಹೇಳಿಕೆ ವಿವಾದ ಸೃಷ್ಟಿಸಿದೆ.
ಸಚಿವ ಮಾಂಡ್ರೆಕರ್ ಹೇಳಿಕೆ ಬಿಜೆಪಿಯ ಖಾಪ್ ಪಂಚಾಯತಿಯನ್ನು ಎತ್ತಿ ತೋರಿಸುತ್ತದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಗೋವಾದ ಕಲೆ ಮತ್ತು ಸಂಸ್ಕ್ರತಿ ಸಚಿವಾಲಯ ಆಯೋಜಿಸಿದ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳೆಯರು ಸಂಜೆಯಾಯಿತು ಅಂದರೆ ಟಿವಿ ಧಾರವಾಹಿಗಳನ್ನು ನೋಡುವುದರಲ್ಲಿ ತಮ್ಮನ್ನು ತಾವೇ ಮರೆತುಹೋಗ್ತಾರೆ. ದಿನ ಪೂರ್ತಿ ದುಡಿದು ಬಂದ ಪತಿಯತ್ತ ಕೂಡಾ ಗಮಹರಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಇಂದಿನ ಮಹಿಳೆಯರು ಧಾರವಾಹಿಯಲ್ಲಿ ಮುಳುಗಿದ್ದಾಗ ಪತಿ ಮನೆಗೆ ಬಂದು ಬಟ್ಟೆ ಬದಲಿಸಿದರೂ ತಿರುಗಿಯೂ ನೋಡುವುದಿಲ್ಲ. ಪತಿಗೆ ಒಂದು ಕಪ್ ಟೀ ಕೊಡಬೇಕು ಎನ್ನುವ ಯೋಚನೆ ಕೂಡಾ ಬರುವುದಿಲ್ಲ ಎಂದು ಗೋವಾ ಸಚಿವ ದಯಾನಂದ್ ಮಾಂಡ್ರೆಕರ್ ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.