ಉತ್ತರ ಪ್ರದೇಶ: ಹುಡುಗಿಯರಿಗೆ ಡ್ರಗ್ಸ್ ನೀಡಿ ವೇಶ್ಯಾವಾಟಿಕೆ ಅಡ್ಡಕ್ಕೆ ಕಳುಹಿಸುತ್ತಿದ್ದ ಮಹಿಳೆಯೊಬ್ಬಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಈ ಮಹಿಳೆಯ ಬಂಧನದಲ್ಲಿದ್ದ ಬಾಲಕಿಯೊಬ್ಬಳು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಈ ಕುರಿತು ಲಲಿತ್ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಮಹಿಳೆಯು ಈ ಬಾಲಕಿಯನ್ನು ಅಪಹರಿಸಿ ಸುಮಾರು 1 ತಿಂಗಳಿಂದ ಕೊತ್ವಾಲಿಯಲ್ಲಿ ಬಂಧಿಸಿಟ್ಟಿದ್ದಳಂತೆ. ಮಹಿಳೆ ಕುಡಿಯುವ ನೀರಿನಲ್ಲಿ ಅಮಲು ಪದಾರ್ಥ ಹಾಕಿ ನೀಡಿದ್ದಾಳಂತೆ.ನಂತರ ಪುರುಷರಿಗೆ ಬಾಲಕಿಯನ್ನು ನೀಡುತ್ತಿದ್ದಾಳಂತೆ ಮಹಿಳೆ ಮಾತು ಕೇಳದ ಹುಡುಗಿಯರನ್ನು ಮಾರಾಟ ಕೂಡ ಮಾಡುತ್ತಿದ್ದಳಂತೆ.
ಇದರ ಜತೆಗೆ ಮಹಿಳೆ ಹುಡುಗಿಯರ ವಿಡಿಯೋ ಕೂಡ ಮಾಡಿದ್ದಳಂತೆ. ವೇಶ್ಯಾವಾಟಿಕೆಗೆ ಒಪ್ಪದ ಹುಡುಗಿಯರಿಗೆ ವಿಡಿಯೋ ತೋರಿಸಿ ಬೆದರಿಸುತ್ತಿದ್ದಳಂತೆ. ಬಾಲಕಿ ದೂರಿನ ಮೇರೆಗೆ ಪೊಲೀಸರು ಮಹಿಳೆ ಮನೆ ಮೇಲೆ ದಾಳಿ ನಡೆಸಿದ್ದಾರೆ. ಆದ್ರೆ ಮಹಿಳೆ ತಪ್ಪಿಸಿಕೊಂಡಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ