ಕೋಲ್ಕೊತ್ತಾ: 19 ವರ್ಷದ ಯುವತಿಯೊಬ್ಬಳ ಮೇಲೆ ಇಬ್ಬರು ದುರುಳರು ಅತ್ಯಾಚಾರವೆಸಗಿದ್ದಲ್ಲದೆ, ನಂತರ ಗುಪ್ತಾಂಗಕ್ಕೆ ಕಬ್ಬಿಣದ ಸಲಾಕೆ ತುರುಕಿದ ಹೇಯ ಕೃತ್ಯ ಪಶ್ಚಿಮ ಬಂಗಾಲದಲ್ಲಿ ವರದಿಯಾಗಿದೆ.
ಫೆಬ್ರವರಿ 17 ರಂದು ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅತ್ಯಾಚಾರವೆಸಗಿ ಯುವತಿಯನ್ನು ದಕ್ಷಿಣ ದಿನಾಜ್ ಪುರ ಬಳಿ ಸೇತುವೆ ಕೆಳಗೆ ಬಿಟ್ಟು ತೆರಳಿದ್ದರು.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯ ಧಾರುಣ ಸ್ಥಿತಿ ಕಂಡು ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಇದೀಗ ಮಾಲ್ಟಾ ಮೆಡಿಕಲ್ ಕಾಲೇಜ್ ಗೆ ದಾಖಲಾಗಿರುವ ಯುವತಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಈ ಘಟನೆಯೀಗ ಪಶ್ಚಿಮ ಬಂಗಾಲದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ