Publish Date: Mon, 25 Sep 2017 (15:19 IST)
Updated Date: Mon, 25 Sep 2017 (15:21 IST)
ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ 18ರ ಯುವತಿಯನ್ನು ಸಜೀವವಾಗಿ ದಹಿಸಿದ ಭೀಕರ ಘಟನೆ ರಾಜಸ್ಥಾನದ ಬನ್ಸಾವರ್ ಜಿಲ್ಲೆಯ ಇಸರ್ವಿಯಾ ಪಟ್ಟಣದಲ್ಲಿ ನಡೆದಿದೆ.
ವಿವಾಹವಾಗಲು ಬಯಸಿದ್ದ ಆರೋಪಿ ಯುವಕ ರವಿ ಮತ್ತು ಆತನ ತಂದೆ ಮನೆಯಲ್ಲಿಯೇ ಯುವತಿ ಸೀಮಾಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಶೇ.75 ರಷ್ಟು ಸುಟ್ಟ ಗಾಯಗಳೊಂದಿಗೆ ಸೀಮಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಯುವತಿ ಸೀಮಾ ತಂದೆಯ ಪ್ರಕಾರ, ರವಿ ಎನ್ನುವ ವ್ಯಕ್ತಿ ಸೀಮಾಳನ್ನು ವಿವಾಹವಾಗುವ ಪ್ರಸ್ತಾಪವನ್ನು ಮುಂದಿಟ್ಟಿದ್ದ. ಆದರೆ, ಆತನ ವಿವಾಹ ಪ್ರಸ್ತಾಪವನ್ನು ಸೀಮಾ ತಿರಸ್ಕರಿಸಿದ್ದಳು. ಇದರಿಂದ ಆಕ್ರೋಶಗೊಂಡ ರವಿ ಮತ್ತು ಆತನ ತಂದೆ ಸೀಮಾಳನ್ನು ಜೀವಂತವಾಗಿ ದಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆರೋಪಿ ರವಿಯ ಕಿರುಕುಳ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ. ಪೊಲೀಸರು ಯಾವುದೇ ಕ್ರಮಕೈಗೊಂಡಿರಲಿಲ್ಲ ಎಂದು ಯುವತಿಯ ತಂದೆ ಆರೋಪಿಸಿದ್ದಾನೆ.
ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.