ಅನೈತಿಕ ಸಂಬಂಧಕ್ಕೆ ಅಡ್ಡಿಯಾದ 46 ವರ್ಷ ವಯಸ್ಸಿನ ಪತಿ ಮತ್ತು ಮೂವರು ಮಕ್ಕಳನ್ನು ತನ್ನ ಪ್ರೇಮಿಯ ಸಹಾಯದಿಂದ ಹತ್ಯೆಗೈದ 36 ವರ್ಷ ವಯಸ್ಸಿನ ಕಾಮಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಸಂತೋಷ್ ಎನ್ನುವ ಮಹಿಳೆ 1999ರಲ್ಲಿ ತನಗಿಂತ 10 ವರ್ಷ ಹಿರಿಯನಾದ ಭಂವರಿ ಶರ್ಮಾ ಎಂಬಾತನೊಂದಿಗೆ ವಿವಾಹವಾಗಿದ್ದಳು. ಶರ್ಮಾ ಸದಾ ತನ್ನ ಉದ್ಯೋಗದಲ್ಲಿ ಬಿಜಿಯಾಗಿದ್ದರಿಂದ ಪತ್ನಿ ಸಂತೋಷ್ ತನ್ನ ಪ್ರೇಮವನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಪರಿಸ್ಥಿತಿ ಎದುರಾಗಿತ್ತು.
ಸಂತೋಷ್ ಸಮಯವನ್ನು ಕಳೆಯಲು ನೆರೆಮನೆಯಲ್ಲಿ ವಾಸವಾಗಿದ್ದ ವಿದ್ಯಾರ್ಥಿ ಹನುಮಾನ್ ಪ್ರಸಾದ್ ಎಂಬಾತನೊಂದಿಗೆ ಗೆಳೆತನ ಬೆಳೆಸಿದ್ದಳು. ನಂತರ ಗೆಳೆತನ ಅನೈತಿಕ ಸಂಬಂಧಕ್ಕೆ ತಿರುಗಿತು. ಇಬ್ಬರ ಅನೈತಿಕ ಸಂಬಂಧ ಪತಿ ಮತ್ತು ಹಿರಿಯ ಮಗನಿಗೆ ತಿಳಿದ ನಂತರ ಆಕೆಯನ್ನು ಹನುಮಾನ್‌ನನ್ನು ಭೇಟಿ ಮಾಡದಂತೆ ತಾಕೀತು ಮಾಡಿದ್ದರು ಎನ್ನಲಾಗಿದೆ.
ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿ ಮತ್ತು ಪುತ್ರನ ವಿರುದ್ಧ ಆಕ್ರೋಶಗೊಂಡ ಸಂತೋಷ್, ಅವರ ಹತ್ಯೆಗೆ ಸ್ಕೇಚ್ ಹಾಕಿದ್ದಾಳೆ. ಅವರ ಹತ್ಯೆಯ ನಂತರ ಎಲ್ಲಾ ಸಮಯವನ್ನು ಹನುಮಾನ್‌ನೊಂದಿಗೆ ಕಳೆಯಬಹುದು ಎಂದು ಯೋಜನೆ ರೂಪಿಸಿದ್ದಾಳೆ.
ಹತ್ಯೆಯ ದಿನ ಸಂತೋಷ್, ಆಹಾರದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪತಿ ಮತ್ತು ಮಕ್ಕಳಿಗೆ ನೀಡಿದ್ದಾಳೆ. ಎಲ್ಲರು ದೀರ್ಘನಿದ್ರೆಗೆ ತಲುಪಿದಾಗ, ಮೂವರು ಸುಪಾರಿ ಕಿಲ್ಲರ್‌ರನ್ನು ಕರೆಸಿ ಹತ್ಯೆ ಮಾಡಿಸಿದ್ದಾಳೆ.
ಹತ್ಯೆಯ ನಂತರ ಸಂತೋಷ್, ಹಂತಕರಿಗೆ 60 ಸಾವಿರ ರೂಪಾಯಿ ಮತ್ತು ಸ್ಕೂಟಿ ಕೀ ಉಡುಗೊರೆಯಾಗಿ ನೀಡಿದ್ದಾಳೆ. ಸ್ಕೂಟಿಯಲ್ಲಿ ಮೂವರು ಹಂತಕರು ನೇರವಾಗಿ ಹತ್ತಿರದ ರೈಲ್ವೆ ನಿಲ್ದಾಣಕ್ಕೆ ತೆರಳಿ ಅಲ್ಲಿ ಸ್ಕೂಟಿ ಮತ್ತು ಹತ್ಯೆಗೆ ಬಳಸಿದ ಆಯುಧಗಳನ್ನು ಬಿಟ್ಟು ತೆರಳಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಹಂತಕರು ರೈಲಿಗಾಗಿ ಕಾದಿದ್ದಾರೆ. ಆದರೆ, ರೈಲು ಬಾರದಿದ್ದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳು ಅಟೋದಲ್ಲಿ ಬೇರೆ ಬೇರೆ ಸ್ಥಳಗಳಿಗೆ ತೆರಳಿದ್ದಾರೆ. ಪೊಲೀಸರು ಮಹಿಳೆ ಸಂತೋಷ್‌ಗೆ ಬೆತ್ತದ ರುಚಿ ತೋರಿಸಿದ ಕೂಡಲೇ ಹತ್ಯೆಯ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ಕೂಡಲೇ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.