Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಯಸಿದ ಹುಡುಗನ ತೋರಿಸದ ಮ್ಯಾಟ್ರಿಮೋನಿಯಲ್ ಸೈಟ್ ವಿರುದ್ಧ ವಧು ಕೇಸ್!

ಬಯಸಿದ ಹುಡುಗನ ತೋರಿಸದ ಮ್ಯಾಟ್ರಿಮೋನಿಯಲ್ ಸೈಟ್ ವಿರುದ್ಧ ವಧು ಕೇಸ್!
ನವದೆಹಲಿ , ಬುಧವಾರ, 3 ಅಕ್ಟೋಬರ್ 2018 (09:33 IST)
ನವದೆಹಲಿ: ಬಯಸಿದ ಹುಡುಗನನ್ನು ತೋರಿಸಿಕೊಡದ ಮ್ಯಾಟ್ರಿಮೋನಿಯಲ್ ಸೈಟ್ ಒಂದರ ವಿರುದ್ಧ ಮಹಿಳೆಯೊಬ್ಬರು ಕೇಸು ದಾಖಲಿಸಿ ಪರಿಹಾರ ಪಡೆದುಕೊಳ್ಳುತ್ತಿದ್ದಾರೆ!

ಇದು ನಡೆದಿರುವುದು ರಾಷ್ಟ್ರ ರಾಜಧಾನಿಯಲ್ಲಿ. ಈಕೆ 2016 ರಲ್ಲಿ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಒಂದರ ಜತೆ 58,650 ರೂ. ನೀಡಿ ಒಪ್ಪಂದ ಮಾಡಿಕೊಂಡಿದ್ದರು.

ಆದರೆ ತನಗೆ ಬೇಕಾದ ವರನನ್ನು ವೆಬ್ ಸೈಟ್ ಸಂಸ್ಥೆ ಹುಡುಕಿಕೊಡಲು ವಿಫಲವಾಗಿದೆ ಎಂದು ಪ್ರಕರಣ ದಾಖಲಿಸಿದ್ದ ಯುವತಿ ತಾನು ನೀಡಿದ ಫೀಸ್ ಜತೆಗೆ ಕಾನೂನು ಹೋರಾಟಕ್ಕೆ ವೆಚ್ಚವಾದ 5000 ರೂ. ಮತ್ತು ಪರಿಹಾರ ಧನವಾಗಿ 7000 ರೂ. ಸೇರಿದಂತೆ ಒಟ್ಟು 70000 ರೂ. ಪರಿಹಾರ ಪಡೆಯಲಿದ್ದಾರೆ.

ಆದರೆ ವೆಬ್ ಸೈಟ್ ತಾನು 21 ವರನನ್ನು ತೋರಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದರೂ ಮಾನವೀಯತೆಯಿಂದ 36 ವರನನ್ನು ತೋರಿಸಿಕೊಟ್ಟಿದ್ದೇವೆ. ಹಾಗಿದ್ದರೂ ಆ ಮಹಿಳೆ ನಮಗೆ ಸರಿಯಾಗಿ ಸ್ಪಂದಿಸಲಿಲ್ಲ. ಯಾವುದೇ ವರನನ್ನು ಒಪ್ಪಿಕೊಳ್ಳಲಿಲ್ಲ ಎಂದು ದೂರಿದೆ. ಅದೇನೇ ಇದ್ದರೂ ಇದೀಗ ವರನನ್ನು ಹುಡುಕಿಕೊಡದ ಸಂಸ್ಥೆ ಪರಿಹಾರ ನೀಡಲೇಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ರಾಮನಗರ ಉಪಚುನಾವಣೆ: ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕಣಕ್ಕೆ