ನವದೆಹಲಿ: ಪ್ರಿಯತಮನ ಮನೆಯ ಬೆಡ್ ರೂಂನಲ್ಲಿ ಮಹಿಳೆಯೊಬ್ಬರ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೆಹಲಿಯಲ್ಲಿ ಈ ಘಟನೆ ನಡೆದಿದೆ.
ವಿವಾಹಿತನೊಂದಿಗೆ ಮಹಿಳೆಗೆ ಅನೈತಿಕ ಸಂಬಂಧವಿತ್ತು. ಪ್ರಿಯಕರನೇ ತನ್ನ ಪತ್ನಿ ಮನೆಯಿಂದ ಹೊರಹೋದಾಗ ಪ್ರಿಯತಮೆಯನ್ನು ಕರೆದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಯಾಕಾಗಿ ಈ ಕೊಲೆ ನಡೆದಿದೆ ಎನ್ನುವುದು ಪತ್ತೆಯಾಗಿಲ್ಲ.
ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.