ಇಂಧೋರ್: ಮಗು ಪ್ರತಿನಿತ್ಯ ಹಾಸಿಗೆ ಒದ್ದೆ ಮಾಡುತ್ತಿತ್ತು ಎಂಬ ಸಿಟ್ಟಿನಲ್ಲಿ ಮಹಿಳೆ ಗುಪ್ತಾಂಗವನ್ನು ಸುಟ್ಟು ಚಿತ್ರಹಿಂಸೆ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಈ ಸಂಬಂಧ 40 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಮಗುವನ್ನು ಆರೋಪಿ ಮಹಿಳೆ ತನ್ನ ಸಂಬಂಧಿಕರಿಂದಲೇ ದತ್ತು ಪಡೆದಿದ್ದಳು. ಆದರೆ ಆಕೆಗೆ ಪ್ರತಿನಿತ್ಯ ಚಿತ್ರಹಿಂಸೆ ನೀಡುತ್ತಿದ್ದಳು ಎಂದು ಬೆಳಕಿಗೆ ಬಂದಿದೆ.
ಗುಪ್ತಾಂಗವನ್ನು ಸುಟ್ಟು ಗಾಯಗೊಳಿಸಿರುವುದಲ್ಲದೆ, ತಲೆ ಕೂದಲು ಕಿತ್ತು, ಮೈಮೇಲೆ ಉಗುರಿನಿಂದ ಹಲ್ಲೆ ಮಾಡಿ ಚಿತ್ರಹಿಂಸೆ ನೀಡಿದ್ದಾಳೆ. ಇದೀಗ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮಹಿಳೆಯ ಮೇಲೆ ಪೋಸ್ಕೋ ಖಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.