ಚೆನ್ನೈ: ನಿನ್ನೆ ಅಸ್ತಂಗತರಾದ ತಮಿಳುನಾಡು ಮಾಜಿ ಸಿಎಂ ಎಂ ಕರುಣಾನಿಧಿಯವರ ಅಂತ್ಯಕ್ರಿಯೆಯನ್ನು ಮರೀನಾ ಬೀಚ್ ನಲ್ಲಿ ನಡೆಸಲು ಸರ್ಕಾರ ಆಕ್ಷೇಪಣೆ ಸಲ್ಲಿಸಿದೆ.
ಅಷ್ಟಕ್ಕೂ ಎಐಎಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ತಮ್ಮ ರಾಜ್ಯದ ಮಾಜಿ ಸಿಎಂ ಒಬ್ಬರ ಅಂತ್ಯಕ್ರಿಯೆಗೆ ಮರೀನಾ ಬೀಚ್ ನಲ್ಲಿ ನಡೆಸಲು ಆಕ್ಷೇಪ ಸಲ್ಲಿಸುತ್ತಿರುವುದೇಕೆ ಗೊತ್ತಾ?
ಮರೀನಾ ಬೀಚ್ ನಲ್ಲಿ ಎಂಜಿಆರ್, ಜಯಲಲಿತಾರಂತಹ ಘಟಾನುಘಟಿ ನಾಯಕರ ಸಮಾಧಿಯಿದೆ. ಇದರ ಪಕ್ಕದಲ್ಲೇ ಕರುಣಾನಿಧಿಯವರ ಅಂತ್ಯಕ್ರಿಯೆ ನಡೆಸಲು ಸರ್ಕಾರ 1996 ರಲ್ಲಿ ಕರುಣಾನಿಧಿ ಮುಖ್ಯಮಂತ್ರಿಯಾಗಿದ್ದಾಗ ನಡೆದ ಘಟನೆಯನ್ನು ಉಲ್ಲೇಖಿಸಿ ಆಕ್ಷೇಪಣೆ ಸಲ್ಲಿಸಿದೆ.
1996 ರಲ್ಲಿ ಎಂಜಿಆರ್ ಪತ್ನಿ ಜಾನಕಿ ಮೃತಪಟ್ಟಾಗ ಅಂದು ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿಯವರು ಮರೀನಾ ಬೀಚ್ ನಲ್ಲಿ ಅಂತ್ಯ ಕ್ರಿಯೆಗೆ ಅವಕಾಶ ಕೊಡಲಿಲ್ಲ. ಜಾನಕಿ ಕೂಡಾ ಕೆಲವು ದಿನಗಳ ಕಾಲ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದವರು. ಹಾಗಿದ್ದರೂ ಅವಕಾಶ ಕೊಟ್ಟಿರಲಿಲ್ಲ. ಇದೇ ಘಟನೆಯನ್ನು ಉಲ್ಲೇಖಿಸಿ ಇದೀಗ ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.