ವಾಷಿಂಗ್ಟನ್ : ವಾಟ್ಸಪ್ 2022ರಲ್ಲಿ ಹಲವು ಹಳೆಯ ಫೋನ್ಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲು ಸಿದ್ಧವಾಗಿದೆ.
ಮೆಟಾ ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ಆಂಡ್ರಾಯ್ಡ್ ಹಾಗೂ ಐಒಎಸ್ನ ಹಳೆಯ ಆವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಇತ್ತೀಚಿನ ವರದಿ ತಿಳಿಸಿದೆ.
ಹೌದು, ವಾಟ್ಸಪ್ ಒಂದು ವೇಳೆ ನಿಮ್ಮ ಹಳೆಯ ಫೋನ್ಗಳಲ್ಲಿ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದರೆ ಸಂದೇಶ, ಫೋಟೋ ವೀಡಿಯೋಗಳನ್ನು ಇತರರಿಗೆ ಕಳುಹಿಸಲು ಅಥವಾ ಪಡೆಯಲು ಸಾಧ್ಯವಾಗುವುದಿಲ್ಲ.
ನಿಮ್ಮ ಹಳೆಯ ಫೋನ್ನಲ್ಲಿ ವಾಟ್ಸಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವ ಮೊದಲು ನಿಮ್ಮ ಫೋನ್ನ ಸಾಫ್ಟ್ವೇರ್ ಆವೃತ್ತಿ ಯಾವುದು ಎಂಬುದನ್ನು ಪರಿಶೀಲಿಸುವುದು ಅಗತ್ಯ.
ಆಂಡ್ರಾಯ್ಡ್ ಅಥವಾ ಐಒಎಸ್ ಬಳಕೆದಾರರು ಫೋನ್ನ ಸೆಟ್ಟಿಂಗ್ಸ್ಗೆ ಹೋಗಿ ಅಲ್ಲಿ ಸಾಫ್ಟ್ವೇರ್ ಆವೃತ್ತಿ ಯಾವುದು ಎಂಬುದನ್ನು ಪರಿಶೀಲಿಸಬಹುದು.