ನವದೆಹಲಿ : ಭಾರತವು 5G ಮೊಬೈಲ್ ನೆಟ್ವರ್ಕ್ ಪ್ರಾರಂಭಕ್ಕೆ ಉತ್ಸುಕವಾಗಿದೆ.
5G ನೆಟ್ವರ್ಕ್ ಹೇಗೆ ಕೆಲಸ ಮಾಡುತ್ತದೆ, 4G ಗಿಂತ ಹೇಗೆ ಭಿನ್ನ, ತಾಂತ್ರಿಕ ಹಾಗೂ ವ್ಯವಹಾರ ಕ್ಷೇತ್ರದ ಇದರ ಪರಿಣಾಮ ಹೇಗಿರುತ್ತದೆ ಎಂಬ ಬಗ್ಗೆ ಗ್ರಾಹಕರಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
5G ಹೆಚ್ಚು ವೇಗದಿಂದ ಕೂಡಿದೆ. ಡೌನ್ಲೋಡ್ಗಳು ಪ್ರತಿ ಸೆಕೆಂಡಿಗೆ 10 GB (ಗಿಗಾಬೈಟ್) ಅಥವಾ ಅದಕ್ಕಿಂತ ಹೆಚ್ಚಿನದ್ದಾಗಿದೆ.
TRAI ಪ್ರಕಾರ ಭಾರತದಲ್ಲಿ 4G ಬಳಕೆದಾರರಿಗೆ ಪ್ರಸ್ತುತ ಸರಾಸರಿ ಡೌನ್ಲೋಡ್ ವೇಗಕ್ಕಿಂತ 5G 30 ಪಟ್ಟು ವೇಗವಾಗಿದೆ. ಇದು ಸುಮಾರು 21 Mbps (ಸೆಕೆಂಡಿಗೆ ಮೆಗಾಬೈಟ್) ಸರಾಸರಿ ವೇಗ ಹೊಂದಿದೆ.
5G ಇಂಟರ್ನೆಟ್ ಅನ್ನು ಬಳಸಿಕೊಂಡು 5 GB ಚಲನಚಿತ್ರವನ್ನು 35 ಸೆಕೆಂಡುಗಳಲ್ಲಿ (4G ಯಲ್ಲಿ 40 ನಿಮಿಷ ಆಗುತ್ತದೆ) ಡೌನ್ಲೋಡ್ ಮಾಡಬಹುದು. 3G ಯಲ್ಲಿ 2 ಗಂಟೆ ಬೇಕಾಗುತ್ತದೆ. 2G ಯಲ್ಲಿ 2.8 ದಿನಗಳ ಸಮಯ ಹಿಡಿಯುತ್ತದೆ.