Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

5ಜಿ ಹರಾಜಿಗೆ ಕ್ಯಾಬಿನೆಟ್ ಅನುಮೋದನೆ

5ಜಿ ಹರಾಜಿಗೆ ಕ್ಯಾಬಿನೆಟ್ ಅನುಮೋದನೆ
ನವದೆಹಲಿ , ಬುಧವಾರ, 15 ಜೂನ್ 2022 (15:41 IST)
ನವದೆಹಲಿ : ಭಾರತ ಸರ್ಕಾರ ಸಾರ್ವಜನಿಕ ಉದ್ಯಮಗಳಿಗೆ 5ಜಿ ಸೇವೆಗಳನ್ನು ಒದಗಿಸಲು ತರಂಗಾಂತರ ಹರಾಜಿಗೆ ಅನುಮತಿ ನೀಡಿದೆ.

ಶೀಘ್ರದಲ್ಲೇ ಹೊರಬರಲಿರುವ 5ಜಿ ಸೇವೆ 4ಜಿ ಗಿಂತಲೂ 10 ಪಟ್ಟು ವೇಗವಿರಲಿದೆ ಎಂದು ಸರ್ಕಾರ ತಿಳಿಸಿದೆ. 20 ವರ್ಷಗಳ ಮಾನ್ಯತೆಯ ಅವಧಿಯೊಂದಿಗೆ ಒಟ್ಟು 72 ಜಿಹೆಚ್ಝಡ್ ಸ್ಪೆಕ್ಟ್ರಮ್ ಈ ವರ್ಷದ ಜುಲೈ ಅಂತ್ಯದ ವೇಳೆಗೆ ಹರಾಜಿಗೆ ಇಡಲಾಗುತ್ತದೆ.

ವಿವಿಧ ಕಡಿಮೆ (600 MHz, 700 MHz, 800 MHz, 900 MHz, 1800 MHz, 2100 MHz, 2300 MHz) ಮಧ್ಯಮ (3300 MHz) ಹಾಗೂ ಹೆಚ್ಚಿನ(26 GHz) ಆವರ್ತಗಳಲ್ಲಿ ಸ್ಪೆಕ್ಟ್ರಮ್ಗಾಗಿ ಹರಾಜು ನಡೆಯಲಿದೆ. 

ಪ್ರಸ್ತುತ 4ಜಿ ಸೇವೆಗಳ ಮೂಲಕ ಸಾಧ್ಯವಾಗುವುದಕ್ಕಿಂತಲೂ 10 ಪಟ್ಟು ಹೆಚ್ಚಿನ ವೇಗದ ಹಾಗೂ ಸಾಮರ್ಥ್ಯದ 5ಜಿ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ರೋಲ್ ಔಟ್ ಮಾಡಲು ಟೆಲಿಕಾಂ ಸೇವಾ ಪೂರೈಕೆದಾರರು ಮಧ್ಯಮ ಹಾಗೂ ಹೆಚ್ಚಿನ ಬ್ಯಾಂಡ್ ಸ್ಪೆಕ್ಟ್ರಮ್ ಅನ್ನು ಬಳಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.

ಇದೇ ಮೊದಲ ಬಾರಿಗೆ ಯಶಸ್ವಿ ಬಿಡ್ದಾರರಿಗೆ ಮುಂಗಡ ಪಾವತಿ ಮಾಡುವ ಯಾವುದೇ ಕಡ್ಡಾಯ ಕ್ರಮವಿಲ್ಲ. ಸ್ಪೆಕ್ಟ್ರಮ್ಗಾಗಿ ಪಾವತಿಗಳನ್ನು 20 ಸಮಾನ ವಾರ್ಷಿಕ ಕಂತುಗಳಲ್ಲಿ ಪ್ರತಿ ವರ್ಷದ ಆರಂಭದಲ್ಲಿ ಮುಂಗಡವಾಗಿ ಪಾವತಿಸಬಹುದು.

ಇದು ನಗದು ಹರಿವಿನ ಅಗತ್ಯತೆಗಳನ್ನು ಗಮನಾರ್ಹವಾಗಿ ಸರಾಗಗೊಳಿಸುವ ನಿರೀಕ್ಷೆಯಿದೆ ಮತ್ತು ಈ ವಲಯದಲ್ಲಿ ವ್ಯಾಪಾರ ಮಾಡುವ ವೆಚ್ಚವನ್ನು ಕಡಿಮೆ ಮಾಡುತ್ತದೆ. ಬಿಡ್ದಾರರಿಗೆ ಭವಿಷ್ಯದ ಹೊಣೆಗಾರಿಕೆಗಳಿಲ್ಲದೇ 10 ವರ್ಷಗಳ ಬಳಿಕ ಸ್ಪೆಕ್ಟ್ರಮ್ ಅನ್ನು ಒಪ್ಪಿಸುವ ಆಯ್ಕೆಯನ್ನೂ ನೀಡಲಾಗುವುದು ಎಂದು ಕೇಂದ್ರ ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಖಾಸಗಿ ರೈಲು ಸಂಚಾರ ಆರಂಭ