ಅನಂತಪುರಂ : ಆಂಧ್ರಪ್ರದೇಶದ ಅನಂತಪುರಂನಲ್ಲಿ 19 ವರ್ಷದ ಹುಡುಗಿಯ ಭಾಗಶಃ ಸುಟ್ಟ ಶವ ಪತ್ತೆಯಾಗಿದೆ.
ತನ್ನ ಕಚೇರಿಯಿಂದ ಹುಡುಗಿ ವಾಪಾಸಾಗದ ಹಿನ್ನಲೆಯಲ್ಲಿ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆಕೆಯ ಹುಡುಕಾಟದಲ್ಲಿ ತೊಡಗಿದ್ದಾಗ ಆಕೆಯ ಶವ ಪತ್ತೆಯಾಗಿದೆ.
ಕುಟುಂಬಸ್ಥರು ಆಕೆಯ ಗೆಳೆಯನೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.