Webdunia - Bharat's app for daily news and videos

Install App

ಮೂರು ವರ್ಷದ ಮಗನಿಗೆ ಪಾಪಿ ಮಲತಂದೆ ಮಾಡಿದ್ದಾದರೂ ಏನು ಗೊತ್ತಾ...?

Webdunia
ಬುಧವಾರ, 24 ಜನವರಿ 2018 (15:48 IST)
ಮಧ್ಯಪ್ರದೇಶ : ಮೂರು ವರ್ಷದ ಮಗನಿಗೆ ಲೆಕ್ಕ ಎಣಿಸಲು ಬರಲಿಲ್ಲವೆಂದು ಮಲತಂದೆಯೊಬ್ಬ ನೇತುಹಾಕಿ ರಕ್ತಬರುವಂತೆ ಹೊಡೆದಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಶಾಜಾಪುರ್ ನಲ್ಲಿ ನಡೆದಿದೆ.


ಬಾಲಕನಿಗೆ 10 ರವರೆಗೆ ಸಂಖ್ಯೆ ಎಣಿಸಲು ಬರಲಿಲ್ಲವೆಂದು ಪಾಪಿ ತಂದೆ ಈ ಕೃತ್ಯವೆಸಗಿದ್ದಾನೆ. ಮಗುವನ್ನು ತಲೆಕೆಳಗಾಗಿ ನೇತುಹಾಕಿ ಚಪ್ಪಲಿ, ಬೆಲ್ಟ್ ನಿಂದ ಮನಬಂದಂತೆ ಹೊಡೆದಿದ್ದಾನೆ. ತಾಯಿ ಅದನ್ನು ತಡೆಯಲು ಬಂದಾಗ ಆಕೆಯನ್ನು ಹೊಡೆದಿದ್ದಾನೆ. ನೆರೆಹೊರೆಯವರು ಕೂಡ ಮಗುವನ್ನು ರಕ್ಷಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗದ ಕಾರಣ ಸ್ಥಳೀಯರು ಕೂಡಲೆ ಪೊಲೀಸರಿಗೆ ತಿಳಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಪಾಪಿ ತಂದೆ ಪರಾರಿಯಾಗಿದ್ದಾನೆ. ನಂತರ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ತಲೆ, ಕಣ್ಣು, ತುಟಿ ಹಾಗು ಹೊಟ್ಟೆಯ ಭಾಗದಲ್ಲಿ ಗಾಯಗಳಾಗಿ ರಕ್ತಸ್ರಾವವಾಗಿದೆ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಸ್ಟ್ ಮಿಸ್... ಕೇರಳದ ಮಲಪ್ಪುರಂನಲ್ಲಿ ಭೀಕರ ಭೂಕುಸಿತ, ಎದ್ನೋ ಬಿದ್ನೋ ಎಂದು ಓಡಿದ ಜನ video

ರೈಲ್ವೇ ಟ್ರ್ಯಾಕ್ ದಾಟಲು ಹೋದ ಯುವಕನಿಗೆ ಸೆಕೆಂಡುಗಳ ಅಂತರದಲ್ಲಿ ಪವಾಡವೇ ನಡೆದು ಹೋಯ್ತು Video

ಕನಿಷ್ಠ ಗೌರವವೂ ಬೇಡ್ವಾ... ಸಚಿವ ಸ್ಥಾನ ಸಿಗಲಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಸಿಎಂ ಬಗ್ಗೆ ಹೀಗೆಲ್ಲಾ ಹೇಳೋದಾ Video

ಶಾಲೆಗೆ ಬಂದು ಟೀಚರ್ ಗೇ ಚಾಕುವಿನಿಂದ ಚುಚ್ಚಿ ಕೊಂದೇ ಬಿಟ್ಟ ಪಾಪಿ Shocking Video

ಕರ್ನಾಟಕ ನೂತನ ಸಚಿವರ ಲಿಸ್ಟ್ ನೋಡಿ ಅಸಮಾಧಾನಿತರು ಕೇಳುತ್ತಿರುವುದು ಇದೇ ಮೂರು ಪ್ರಶ್ನೆ

ಮುಂದಿನ ಸುದ್ದಿ
Show comments