Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಚ್ಚರಿ ಎನಿಸುತ್ತದೆ! ಪತ್ನಿ ಮೃತ ದೇಹದೊಂದಿಗೆ ಮಲಗಬೇಕು!

ಅಚ್ಚರಿ ಎನಿಸುತ್ತದೆ! ಪತ್ನಿ ಮೃತ ದೇಹದೊಂದಿಗೆ ಮಲಗಬೇಕು!
ನವದೆಹಲಿ , ಗುರುವಾರ, 11 ನವೆಂಬರ್ 2021 (17:06 IST)
ಪ್ರಪಂಚದಲ್ಲಿ ಒಂದೊಂದು ಪ್ರದೇಶವಾರು, ಸಂಪ್ರದಾಯಗಳು ವಿಭಿನ್ನ ಮತ್ತು ವಿಚಿತ್ರವಾದ ಆಚಾರಗಳನ್ನು ಕಂಡು ಕೇಳಿದ್ದೇವೆ.
ಆದರೆ ಇಲ್ಲೊಂದು ವಿಚಿತ್ರ ಎನಿಸುವಂತಹ ಸಂಸ್ಕøತಿ! ಮನುಷ್ಯನ ದೇಹಕ್ಕೆ ಜೀವ ಇದ್ದರಷ್ಟೆ ಅದಕ್ಕೆ ಬೆಲೆ. ಮೃತ ದೇಹ ಎಂದರೆ ಹೆದರುವಂತಹ ಸಂಗತಿ.
ಭಾರತ ಮಾತ್ರವಲ್ಲ ವಿದೇಶಗಳಲ್ಲಿ ವಿಲಕ್ಷಣ ಪದ್ದತಿಗಳಿವೆ ಅದರಲ್ಲೂ ಪಚ್ಚಿಮ ಕೀನ್ಯಾ ಲುವೋ ಬುಡಕಟ್ಟಿನ ಜನರು ವಿಚಿತ್ರ ಸಂಪ್ರದಾಯವನ್ನು ಆಚರಿಸುತ್ತಾರೆ. ಇವರ ಕೆಲವೊಂದು ಪದ್ದತಿಯನ್ನು ಕೇಳಿದಾಗಲೇ ಅಚ್ಚರಿಯಾಗುತ್ತದೆ. ಏಕೆಂದರೆ ಕಲ್ಪನೆಗೂ ನಿಲುಕದ್ದಾಗಿದೆ.
ವಿಶ್ವದ ಮೂಲೆ ಮೂಲೆ ಸುತ್ತಾಡಿದರೆ ಆ ದೇಶಗಳ ಸಂಸ್ಕೃತಿ, ಪದ್ಧತಿ ಆಚಾರ ವಿಚಾರದ ಬಗ್ಗೆ ತಿಳಿಯುತ್ತದೆ. ಭಾರತವನ್ನೇ ಗಮನಿಸಿದಾಗ ಇಲ್ಲಿ ನಾನಾ ಜಾತಿಗಳಿವೆ. ಒಂದಕ್ಕಿಂತ ಒಂದು ಭಿನ್ನವಾದ ಸಂಸ್ಕತಿ, ಪದ್ಧತಿಯನ್ನು ಆಚರಿಸುವ ಜನರಿದ್ದಾರೆ.
ಭಾರತ ಮಾತ್ರವಲ್ಲ ವಿದೇಶಗಳಲ್ಲಿ ವಿಲಕ್ಷಣ ಪದ್ದತಿಗಳಿವೆ ಅದರಲ್ಲೂ ಪಚ್ಚಿಮ ಕೀನ್ಯಾ ಲುವೋ ಬುಡಕಟ್ಟಿನ ಜನರು ವಿಚಿತ್ರ ಸಂಪ್ರದಾಯವನ್ನು ಆಚರಿಸುತ್ತಾರೆ. ಇವರ ಕೆಲವೊಂದು ಪದ್ದತಿಯನ್ನು ಕೇಳಿದಾಗಲೇ ಅಚ್ಚರಿಯಾಗುತ್ತದೆ. ಏಕೆಂದರೆ ಕಲ್ಪನೆಗೂ ನಿಲುಕದ್ದಾಗಿದೆ.ಲುವೋ ಬುಡಕಟ್ಟಿನ ಜನಾಂಗದಲ್ಲಿ ಪತಿ ಸಾವಿನ ನಂತರ ಪತ್ರಿಯ ಶುದ್ಧೀಕರಣ ನಡೆಯುತ್ತದೆ. ಗಂಡ ಸತ್ತ ನಂತರ ಹೆಂಡತಿಯಾದವಳು ಒಂದು ರಾತ್ರಿ ಶವದ ಜೊತೆ ಮಲಗಬೇಕು. ಗಂಡನ ಜೊತೆಗೆ ಸಂಬಂಧ ಬೆಳೆಸಿದಂತೆ ಕಲ್ಪನೆ ಮಾಡಬೇಕು. ಆಗ ಪತಿಯ ಆತ್ಮಕ್ಕೆ ಶಾತಿ ಸಿಗುವುದು ಮಾತ್ರವಲ್ಲದೆ ಪತ್ನಿ ಶುದ್ಧವಾಗುತ್ತಾಳೆ. ಈ ಸಂಪ್ರದಾಯ ಆಚರಿಸಿದ ನಂತರ ಪತ್ನಿ ಬೇರೊಂದು ವಿವಾಹ ಆಗಬಹುದು
ಗಂಡ ಹೆಂಡತಿ ನಡುವೆ ಜಗಳ ನಡೆಯುವುದು ಸಾಮಾನ್ಯ . ಆದರೆ ಒಂದು ವೇಳೆ ಜಗಳವಾದರೆ ಇಬ್ಬರು ಕೋಲಿನಿಂದ ಹೊಡೆದುಕೊಳ್ಳುವಂತಿಲ್ಲ. ಹೀಗೆ ಮಾಡಿದರೆ ಪಾಪ ಅಂಟಿಕೊಳ್ಳುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಲುವೋ ವಿಚಿತ್ರ ಸಂಪ್ರದಾಯವನ್ನು ನಂಬಿ ಬದುಕುತ್ತಿದ್ದಾರೆ.ಜಗಳದ ಬಳಿಕ ಪತಿ ಮತ್ತು ಪತ್ನಿ ಹಿರಿಯರು ಗಿಡಮೂಲಿಕೆಯನ್ನು ಕುಡಿಯಲು ನೀಡಿತ್ತಾರೆ, ಇದನ್ನು ಸೇವಿಸಿ ಶಾರೀರಿಕ ಸಂಬಂಧ ಬೆಳೆಸಲು ಹೇಳುತ್ತಾರೆ. ಇದರಿಂದ ಇಬ್ಬರ ನಡುವಿನ ಮನಸ್ಥಾಪಗಳು ಕಡಿಮೆಯಾಗುತ್ತದೆ ಎಂಬ ನಂಬಿಕೆ ಲುವೋ ಬುಡಕಟ್ಟಿನಲ್ಲಿದೆ.
ಲುವೋ ಬುಡಕಟ್ಟಿನಲ್ಲಿ ಬಹುಪತ್ನಿತ್ವ ಜಾರಿಯಲ್ಲಿದೆ. ಗಂಡ ಎಷ್ಟು ಜನರನ್ನು ವಿವಾಹವಾಗಬಹುದು. ಇದಕ್ಕೆ ಹೆಂಡತಿಯರು ವಿರೋಧ ವ್ಯಕ್ತಪಡಿಸುವುದಿಲ್ಲ. ಮೊದಲೇ ಹೇಳಿದಂತೆ ಇಷ್ಟು ಮಾತ್ರವಲ್ಲ, ಪ್ರಪಂಚವನ್ನು ಒಂದು ಬಾರಿ ಸುತ್ತಾಡಿದರೆ ಅಲ್ಲಿನ ಸಂಸ್ಕೃತಿ ಮತ್ತು ವಿಲಕ್ಷಣ ಪದ್ಧತಿಗಳ ಬಗ್ಗೆ ತಿಳಿಯುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೀಗೂ ಉಂಟೇ...? ಯಾರೂ ಸಾಯುವ ಹಾಗಿಲ್ಲ!?