Publish Date: Wed, 04 Oct 2023 (14:25 IST)
Updated Date: Wed, 04 Oct 2023 (15:28 IST)
ಈದ್ ಮಿಲಾದ್ ವೇಳೆ ಶಿವಮೊಗ್ಗದಲ್ಲಿ ಆದ ಗಲಭೆಗೆ ಸಂಬಂಧ ಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದ್ದು ಕೋಮು ಗಲಭೆ ಆಗಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಬಿಜೆಪಿ ಸಮಾಜ ಸ್ವಾಸ್ಥ್ಯ ಕದಡುತ್ತಿದ್ದು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರಿಗೆ ಆರೋಪ ಮಾಡುವುದು ಬಿಟ್ಟು ಬೇರೆ ಕೆಲಸ ಇಲ್ಲ. ಶಿವಮೊಗ್ಗದಲ್ಲಿ ಕಲ್ಲು ಹೊಡೆದಿದ್ದಾರೆ ಎನ್ನುವುದು, ಕೋಮು ಗಲಭೆಯಂತಹ ಘಟನೆಯಾಗಿಲ್ಲ. ಒಂದು ವೇಳೆ ಕೋಮು ಗಲಭೆ ಮಾಡಿದ್ದರೇ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.