Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಮ್ಮದು ಗಡಿ ರಹಿತ ದೇಶ ಕೈಲಾಸ

ನಮ್ಮದು ಗಡಿ ರಹಿತ ದೇಶ ಕೈಲಾಸ
ಕರಾವಳಿ , ಮಂಗಳವಾರ, 21 ಮಾರ್ಚ್ 2023 (16:32 IST)
ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಸ್ಥಾಪಿಸಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ದೇಶದ ಬಗ್ಗೆ ಅಲ್ಲಿನ ಪ್ರತಿನಿಧಿಗಳು ಅಧಿಕೃತ ಟ್ವಿಟರ್ ಹೇಳಿಕೆ ನೀಡಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ರಾಷ್ಟ್ರವು ಪ್ರಾಚೀನ ಪ್ರಬುದ್ಧ ಪುನರುಜ್ಜೀವನಗೊಂಡ ಹಿಂದೂ ನಾಗರಿಕತ್ವದ ದೇಶವಾಗಿದೆ. ಅದು ಗಡಿ ರಹಿತ, ಸೇವೆ ಆಧಾರಿತ ರಾಷ್ಟ್ರವಾಗಿದೆ. ಅನೇಕ ಸಂಸ್ಥೆಗಳು ಮತ್ತು NGOಗಳು ಮತ್ತು ಮಠಗಳಿಂದ ದೇಶ ನಿರ್ವಹಣೆ ಆಗುತ್ತಿದೆ. ಲಿಂಗ, ಜನಾಂಗ, ರಾಷ್ಟ್ರೀಯತೆ, ಬಣ್ಣ ಮತ್ತು ಜಾತಿಯ ಭೇದ-ಭಾವವಿಲ್ಲದೆ ಜಾಗತಿಕ ಶಾಂತಿಯು ಕೈಲಾಸದ ಉದ್ದೇಶವಾಗಿದೆ. ಏಕತೆ ಆಧಾರದಲ್ಲಿ ಮತ್ತು ಎಲ್ಲರಿಗೂ ಜ್ಞಾನೋದಯ ಎಂಬ ಪರಿಕಲ್ಪನೆಯೊಂದಿಗೆ ದೇಶ ಸ್ಥಾಪನೆಯಾಗಿದೆ ಎಂದು ಕೈಲಾಸದ ಪ್ರತಿನಿಧಿಗಳು ಅಧಿಕೃತ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಕೈಲಾಸ NGO ಪ್ರತಿನಿಧಿಗಳು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಭೆಯಲ್ಲಿ ಭಾಗವಹಿಸಿದ್ದರು. 2020ರ ಡಿಸೆಂಬರ್​​ನಲ್ಲಿ ಈಕ್ವೆಡಾರ್ ಕರಾವಳಿಯ ದ್ವೀಪವೊಂದಕ್ಕೆ ಸ್ವಾಮಿ ನಿತ್ಯಾನಂದ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂದು ನಾಮಕರಣ ಮಾಡಿದ್ದು, ಸ್ವತಂತ್ರ ದೇಶವನ್ನಾಗಿಸಲು ಹೊರಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುಟಿನ್​ ಭೇಟಿಯಾಗಲಿದ್ದಾರೆ ಚೀನಾ ಅಧ್ಯಕ್ಷ