Webdunia - Bharat's app for daily news and videos

Install App

ವಕ್ಫ್ ಮಂಡಳಿ ಕಾನೂನು ತಿದ್ದುಪಡಿ ಮಸೂದೆ ಮಂಡನೆ: ಹಳೆ ಕಾನೂನು ಹೇಗಿತ್ತು, ಹೊಸದರಲ್ಲಿ ಏನು ಬದಲಾವಣೆಯಾಗಿದೆ ಇಲ್ಲಿದೆ ವಿವರ

Krishnaveni K
ಗುರುವಾರ, 8 ಆಗಸ್ಟ್ 2024 (15:23 IST)
ನವದೆಹಲಿ: ಕೇಂದ್ರ ಸರ್ಕಾರದ ಬಹುನಿರೀಕ್ಷಿತ ವಕ್ಫ್ ಮಂಡಳಿ ಕಾನೂನು ತಿದ್ದುಪಡಿ ಮಾಡುವ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಯಿತು. ಇದಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದವು.

ವಕ್ಫ್ ಮಂಡಳಿಗೆ ಜನರು ಸ್ವ ಇಚ್ಛೆಯಿಂದ ದಾನವಾಗಿ ನೀಡುತ್ತಿದ್ದಾರೆ. ಧಾರ್ಮಿಕ ಸಂಸ್ಥೆಗಳಿಗೆ ಸ್ಥಿರ ಮತ್ತು ಚರಾಸ್ಥಿ ನೀಡುವ ಅಧಿಕಾರವಿದೆ. ವಕ್ಫ್ ಮಂಡಳಿಗೆ ಬೇರೆ ಧರ್ಮದವರನ್ನು ನೇಮಿಸುವುದು ಸರಿಯಲ್ಲ. ಅಯೋಧ್ಯೆ ಟ್ರಸ್ಟ್ ಗೆ ಬೇರೆ ಧರ್ಮದವರನ್ನು ನಿಯೋಜಿಸುತ್ತೀರಾ ಎಂದು ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆದರೆ ಈ ಮಸೂದೆಯಿಂದ ಸಂವಿಧಾನದ ಉಲ್ಲಂಘನೆಯಾಗುತ್ತಿಲ್ಲ ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಹಕ್ಕು ಸಿಗದವರಿಗೆ ಹಕ್ಕು ಪತ್ರ ನೀಡಲು ಈ ಮಸೂದೆ ಮಂಡಿಸಲಾಗುತ್ತಿದೆ. ಇದನ್ನು ಬೆಂಬಲಿಸಿ ಎಂದು ಅವರು ವಿಪಕ್ಷಗಳನ್ನು ಕೋರಿದರು. ಆದರೆ ಇದರ ವಿರುದ್ಧ ಹೋರಾಡುವುದಾಗಿ ವಿಪಕ್ಷ ಸದಸ್ಯ ಅಖಿಲೇಶ್ ಯಾದವ್ ಹೇಳಿದ್ದಾರೆ.

ವಕ್ಫ್ ಮಂಡಳಿ ಹೇಗೆ ಕಾರ್ಯನಿರ್ವಹಿಸುತ್ತದೆ?
1954 ರಲ್ಲಿ ವಕ್ಫ್ ಕಾಯ್ದೆಯನ್ನು ಸಂಸತ್ ನಲ್ಲಿ ಅಂಗೀಕರಿಸಲಾಯಿತು. 1955 ರಲ್ಲಿ ಅದಕ್ಕೆ ತಿದ್ದುಪಡಿ ತರಲಾಯಿತು. 2013 ರಲ್ಲಿ ಮಾಡಿದ್ದ ಕೆಲವೊಂದು ತಿದ್ದುಪಡಿಯಿಂದ ವಕ್ಫ್ ಮಂಡಳಿ ಮತ್ತಷ್ಟು ಪ್ರಬಲವಾಯಿತು. ವಕ್ಫ್ ಮಂಡಳಿಯ ಯಾರೊಬ್ಬರ ಆಸ್ತಿಯನ್ನೂ ತನ್ನದೆಂದು ಘೋಷಿಸಬಹುದು ಮತ್ತು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.

ವಕ್ಫ್ ಆಸ್ತಿ ಮತ್ತು ಧಾರ್ಮಿಕ ಸಂಸ್ಥೆಗಳ ನಿರ್ವಹಣೆಗಾಗಿ ಮಾಡಿದ ಕಾಯ್ದೆ ಇದಾಗಿದೆ. ವಕ್ಫ್ ಕಾಯ್ದೆ 1955 ರ ಪ್ರಕಾರ ಧಾರ್ಮಿಕ ಉದ್ದೇಶಕ್ಕಾಗಿ ಈ ದತ್ತಿಗೆ ಶಾಶ್ವತವಾಗಿ ಚರ ಅಥವಾ ಸ್ಥಿರಾಸ್ಥಿಯನ್ನು ಶಾಶ್ವತವಾಗಿ ಸಮರ್ಪಿಸಬಹುದಾಗಿದೆ.

ಹೊಸ ಕಾಯಿದೆಯಲ್ಲಿ ಏನು ಹೇಳಲಾಗಿದೆ
ತಿದ್ದುಪಡಿ ವಿಧೇಯಕದ ಪ್ರಕಾರ ವಕ್ಫ್ ಮಂಡಳಿಗಳು ತಮ್ಮ ಆಸ್ತಿಗಳನ್ನು ಜಿಲ್ಲಾಧಿಕಾರಿಗಳ ಬಳಿ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸುತ್ತದೆ. ದೇಶದಲ್ಲಿ 30 ವಕ್ಫ್ ಮಂಡಳಿಗಳಿದ್ದು ಕೋಟ್ಯಾಂತರ ಮೌಲ್ಯದ ಆಸ್ತಿ ನೋಡಿಕೊಳ್ಳುತ್ತದೆ. ಇದೆಲ್ಲದರಿಂದ ಕೋಟ್ಯಾಂತರ ರೂಪಾಯಿ ಆದಾ ಯಬರುತ್ತದೆ. ವಕ್ಫ್ ಆಸ್ತಿಯನ್ನು ಧಾರ್ಮಿಕ, ಬಡವರ, ವಿದ್ಯಾಭ್ಯಾಸಕ್ಕಾಗಿ ಬಳಸಿಕೊಳ್ಳಬೇಕು ಎಂಬುದು ನಿಯಮದಲ್ಲಿದೆ.

ವಕ್ಫ್ ಬೋರ್ಡ್ ಇತರರ ಆಸ್ತಿಯನ್ನು ಕಬಳಿಸಿರುವುದರ ಬಗ್ಗೆ ಅನೇಕ ಬಾರಿ ವಿವಾದಗಳಾಗಿದ್ದು ಇದೆ. ಆದರೆ ಈಗಿರುವ ಕಾನೂನು ಪ್ರಕಾರ ವಕ್ಫ್ ಬೋರ್ಡ್ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರವೂ ಇಲ್ಲ! 2013 ರಲ್ಲಿ ತಂದ ತಿದ್ದುಪಡಿ ಪ್ರಕಾರ ಭೂ ಮಾಲಿಕತ್ವದ ವಿಚಾರವಾಗಿ ವಿವಾದವಾದರೆ ವಕ್ಫ್ ಮಂಡಳಿಯ ನಿರ್ಧಾರವೇ ಅಂತಿಮವಾದದ್ದು. ಮಂಡಳಿಯ ನಿರ್ಧಾರವನ್ನು ಪ್ರಶ್ನಿಸುವ ಅಥವಾ ರದ್ದು ಮಾಡುವ ಅಧಿಕಾರ ನ್ಯಾಯಮಂಡಳಿಗೆ ಮಾತ್ರವಿದೆ. ನ್ಯಾಯಮಂಡಳಿಯಲ್ಲಿ ಆಡಳಿತಾತ್ಮಕ ಅಧಿಕಾರಿಗಳಿರುತ್ತಾರೆ. ಅವರೇ ವ್ಯಾಜ್ಯಗಳನ್ನು ತೀರ್ಮಾನಿಸುತ್ತಾರೆ. ಆದರೆ ಈಗ ತಂದಿರುವ ತಿದ್ದುಪಡಿಯಲ್ಲಿ ವಕ್ಫ್ ಮಂಡಳಿಯ ಅಧಿಕಾರ ವ್ಯಾಪ್ತಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ಮುಸ್ಲಿಮ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರದ ಮಸೂದೆ ವಿರುದ್ಧ ಆಕ್ರೋಶ ಹೊರಹಾಕಿರುವ ಸಂಸದ ಅಸವುದ್ದೀನ್ ಓವೈಸಿ ನೀವು ಮುಸ್ಲಿಮರ ಶತ್ರುಗಳು ಎನ್ನುವುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಧನಾ ಸಮಾವೇಶದಲ್ಲಿ ಸಿಎಂ ಈ ಪ್ರಶ್ನೆಗೆಲ್ಲ ಉತ್ತರಿಸಬೇಕು: ಎಚ್‌ ವಿಶ್ವನಾಥ್‌

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ವರಸೆಯೇ ಬದಲಿಸಿದ ಡಿಕೆ ಶಿವಕುಮಾರ್

ಬಿಡದಿಯ ಮೂಕ ಬಾಲಕಿಯ ಹತ್ಯೆ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್‌, ಸಿಸಿಟಿವಿಯಲ್ಲಿ ಸೆರೆಯಾಯಿತು ಸಾವಿನ ಅಸಲಿ ಕಾರಣ

ಏನ್ರಿ ಅದು ಕ್ಷಮೆ, ಮೊದಲು ನಡತೆಯಲ್ಲಿ ಬದಲು ಮಾಡಿಕೊಳ್ಳಿ: ಸೋಫಿಯಾ ಖುರೇಷಿ ವಿರುದ್ಧದ ಹೇಳಿಕೆಗೆ ವಿಜಯ್ ಶಾಗೆ ಗದರಿದ ಸುಪ್ರೀಂ

ನಾವು ಎಲ್ಲಿ ಪ್ರತಿ ತಿಂಗಳು ಹಣ ಕೊಡ್ತೀವಿ ಅಂತಾ ಹೇಳಿದ್ವಿ: ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments